Udupi: ಕಂಬಳದ ಎಲ್ಲಾ ವಿಧಿವಿಧಾನ ಪೂರೈಸಿ ಮನೆಗೆ ಬಂದು ಬದುಕಿನ ಪಯಣ ಮುಗಿಸಿದ 90ರ ಪ್ರಾಯದ ಜಯರಾಮ ಹೆಗ್ಡೆ!!

Udupi: ಉಡುಪಿಯ ಬ್ರಹ್ಮಾವರ ಸಮೀಪದ ಚೇರ್ಕಾಡಿಯ ಕಂಬಳ ಎಂದರೆ ಬಹಳ ವಿಶೇಷ. ಅದಕ್ಕೆ ಅದರದ್ದೇ ಆದ ಮಹತ್ವವಿದೆ. ಅಂತೆಯೇ ಈ ವರ್ಷದ ಸಾಂಪ್ರದಾಯಿಕ ಕೂಡ ಸಂಪನ್ನವಾಗಿದೆ. ಆದರೆ ಈಗ ಈ ನಡುವೆ ಚೇರ್ಕಾಡಿಯಲ್ಲಿ(Cherkhady) ಅಪರೂಪದ ವಿದ್ಯಮಾನ ಸಂಭವಿಸಿದೆ.

 

 

ನಾವು ಹೇಳುತ್ತಿರುವ ಈ ಸುದ್ದಿಯನ್ನು ಕೇಳಿ ದುಃಖ ಉಂಟಾಗಬಹುದು, ಅಚ್ಚರಿಯಾಗಬಹುದು ಅಥವಾ ಇದು ಎಂತಹ ಪವಾಡ ಎಂದು ಕೂಡ ಅನಿಸಬಹುದು. ಅದೇನೆಂದರೆ ಕಂಬಳ ನಡೆಯುವಾಗ ಗುತ್ತಿನ ಮನೆತನದ ಹಿರಿಯರು ಮುಖ್ಯಸ್ಥರಾಗಿ ಎಲ್ಲವನ್ನು ನಿರ್ವಹಿಸುವ ಪರಿಪಾಠ ಇದೆ. ತಮ್ಮ ಅತ್ಯಂತ ಇಳಿ ವಯಸ್ಸಿನಲ್ಲಿ ಗುತ್ತಿನ ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ ಚೇರ್ಕಾಡಿ ಜಯರಾಮ ಹೆಗ್ಡೆ(Jayarama Hegde)ಎನ್ನುವವರು ಕೊನೆಯುಸಿರೆಳೆದಿದ್ದಾರೆ.

 

ಹೌದು, 90 ವಯಸ್ಸಿನ ಜಯರಾಮ ಹೆಗ್ಗಡೆಯವರು ಕಂಬಳ ಮುಗಿಯುವವರೆಗಿನ ಎಲ್ಲಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದರು. ಕೊನೆಯದಾಗಿ ತೆಂಗಿನಕಾಯಿಯನ್ನು ಒಡೆದು ಮನೆ ಸೇರಿದ್ದರು. ಮನೆಗೆ ಹೋದ ನಂತರ ಕೊನೆಯುಸಿರೆಳೆದಿರುವುದು, ಸಂಪ್ರದಾಯದ ಕುರಿತಾದ ಅವರ ಶ್ರದ್ಧೆಗೆ ಸಾಕ್ಷಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಲ್ಲದೆ ಇವರು, ತಮ್ಮ ಅನಾರೋಗ್ಯಗಳನ್ನು ಲೆಕ್ಕಿಸದೆ ಕಂಬಳ ನಡೆಸಿಕೊಟ್ಟಿದ್ದಾರೆ. ಒಂದು ವೇಳೆ ಕಂಬಳ ನಡೆಯುವಾಗ ಅಥವಾ ಅದಕ್ಕಿಂತ ಮುಂಚೆ ಸಾವು ಸಂಭವಿಸಿದ್ದರೆ ಈ ಕಂಬಳ ರದ್ದಾಗ ಬೇಕಿತ್ತು. ಆದರೆ ಕಂಬಳ ಸಂಪನ್ನವಾದ ಬಳಿಕವೇ ಜಯರಾಮ ಹೆಗಡೆಯವರು ಇಹಲೋಕ ತ್ಯಜಿಸಿದ್ದಾರೆ.

Leave A Reply

Your email address will not be published.