Bengaluru: ದೆವ್ವ ಓಡಿಸುವುದಾಗಿ ಹೇಳಿದ ಮಾಂತ್ರಿಕನಿಗೆ 30 ಲಕ್ಷ ಪೀಕಿದ ಹೋಟೆಲ್ ಮಾಲೀಕ.. !! ಮುಂದೇನಾಯ್ತು ಗೊತ್ತಾ?
Bengaluru: ರೆಸ್ಟೊರೆಂಟ್ ಮಾಲೀಕ ಕಾಶಿಫ್ ಎಂಬಾತ ನಕಲಿ ಮಂತ್ರವಾದಿಯನ್ನು ನಂಬಿ ಮೋಸ ಹೋಗಿದ್ದು, ಇದೀಗ ಮಂತ್ರವಾದಿ ದೆವ್ವ ಓಡಿಸುತ್ತೇನೆ ಎಂದು ನಂಬಿಸಿದ ಪರಿಣಾಮ ರೆಸ್ಟೊರೆಂಟ್ ಮಾಲೀಕ ಬರೋಬ್ಬರಿ 31 ಲಕ್ಷ ನಗದು, ಚಿನ್ನ ಮತ್ತು ಬೆಳ್ಳಿ ಕಳೆದುಕೊಂಡಿದ್ದಾನೆ.
ಹೌದು, ಬೆಂಗಳೂರಿನ (Bengaluru) ಹುಣಸಮಾರನಹಳ್ಳಿಯಲ್ಲಿ ಸದ್ದಾ ಅಡ್ಡಾ ಎಂಬ ರೆಸ್ಟೊರೆಂಟ್ ನಡೆಸುತ್ತಿರುವ ಕಾಶಿಫ್ ತನ್ನ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದು, ಸಹಾಯಕ್ಕಾಗಿ ಜ್ಯೋತಿಷಿ & ಮಂತ್ರವಾದಿ ಸೈಯದ್ ಫರೀದ್ ಹುಸೇನ್ ಎಂಬಾತನನ್ನು ಸಂಪರ್ಕಿಸಿದ್ದಾನೆ. ಈ ವೇಳೆ ನಿನ್ನ ರೆಸ್ಟೋರೆಂಟ್ ನಲ್ಲಿ ದೆವ್ವವಿದೆ, ಅದನ್ನು ಬಂಧಿಸಬೇಕು ಎಂದು ಮಂತ್ರವಾದಿ ಹೇಳಿದ್ದು, ರೆಸ್ಟೊರೆಂಟ್ ಮಾಲೀಕ ಅದನ್ನು ನಂಬಿದ್ದಾನೆ.
ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ಮಂತ್ರವಾದಿ ಸೈಯದ್ ಫರೀದ್ ಹುಸೇನ್ ಕಾಶಿಫ್ ನಿಂದ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಲಪಟಾಯಿಸಿ ವಂಚನೆ ಎಸಗಿದ್ದು, ಮೋಸ ಹೋದ ವ್ಯಕ್ತಿ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.