Vitla: ಪ್ರಾಣಕ್ಕೆ ಕುತ್ತು ತಂದ ಜೋಕಾಲಿ ಆಟ; ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕಿ ಸಾವು
Vitla: ಜೋಕಾಲಿಯಲ್ಲಿ ಆಟ ಆಡುತ್ತಿದ್ದ ಸಮಯದಲ್ಲಿ ಹಗ್ಗ ಸುತ್ತಿ ಬಾಲಕಿಯೋರ್ವಳು ಸಾವು ಕಂಡ ಹೃದಯವಿದ್ರಾವಕ ಘಟನೆಯೊಂದು ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ನಡೆದಿದೆ. ಈ ಘಟನೆ ಭಾನುವಾರ (ಡಿ.8) ಸಂಜೆ ನಡೆದಿದೆ.
ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ ಜೋಕಾಲಿ ಆಟದಿಂದ ಸಾವಿಗೀಡಾದ ಬಾಲಕಿ.
ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಶೇರಾ ಶಾಲೆಯಲ್ಲಿ ಕಲಿಯುತ್ತಿದ್ದಳು. ಆಟವಾಡುವ ಸಂದರ್ಭದಲ್ಲಿ ಕುತ್ತಿಗೆಗೆ ಹಗ್ಗ ಸಿಲುಕಿ ಈ ಘಟನೆ ನಡೆದಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.