Bantwala: ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಪೋಸ್ಟ್; ವೈರಲ್ ಬೆನ್ನಲ್ಲೇ ವ್ಯಕ್ತಿಯ ಬಂಧನ
![](https://hosakannada.com/wp-content/uploads/2024/12/6e957c91-d6b3-4069-850d-6786b1361293.jpeg)
Bantwala: ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಪೋಸ್ಟ್‌ವೊಂದನ್ನು ಫೇಸ್‌ಬುಕ್‌ನಲ್ಲಿ ಬರೆದು ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನ ಬಂಧನ ಮಾಡಿರುವ ಘಟನೆಯೊಂದು ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನವಗ್ರಾಮ ಸೈಟ್ ನಿವಾಸಿ ಜಯಪೂಜಾರಿ ಎಂಬಾತನೇ ಬಂಧನಕ್ಕೊಳಗಾದ ವ್ಯಕ್ತಿ.
ಮಹಿಳೆಯರ ಬಗ್ಗೆ ಮಾನಕ್ಕೆ ಕುಂದುಂಟಾಗುವ, ಮಹಿಳೆಯರ ತೇಜೋವಧೆಯುಂಟಾಗುವ ರೀತಿಯಲ್ಲಿ ಧರ್ಮ ಧರ್ಮಗಳ ಮಧ್ಯೆ ಕೋಮುಭಾವನೆ ಕೆರಳುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟೊಂದನ್ನು ಮಾಡಿದ್ದಾನೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸರು ಸುಮೊಟೋ ಕೇಸನ್ನು ದಾಖಲಿಸಿದ್ದು, ಆರೋಪಿಯ ಬಂಧನ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.