Hospital: ಸಂತಾನಹರಣ ಶಸ್ತ್ರಚಿಕಿತ್ಸೆ ಎಡವಟ್ಟು! ವೈದ್ಯನಿಗೆ ಭಾರೀ ದಂಡ

Share the Article

Hospital: ಮಹಿಳೆಯೊಬ್ಬರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 5 ವರ್ಷದ ನಂತರ ಆಕೆ ಗರ್ಭಿಣಿಯಾಗಿ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಮಹಿಳೆಗೆ
ಸರಿಯಾಗಿ ಆಪರೇಷನ್ ಮಾಡದ ವೈದ್ಯನಿಗೆ ಜಿಲ್ಲಾ ಗ್ರಾಹಕರ ಆಯೋಗ 55,000 ರೂ. ದಂಡ ವಿಧಿಸಿದೆ.

ಹೌದು, 2014ರ ಏಪ್ರಿಲ್ 28ರಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ (Hospital) ಎರಡು ಮಕ್ಕಳ ತಾಯಿ ಲಕ್ಷ್ಮಮ್ಮ ಎನ್ನುವವರಿಗೆ ವೈದ್ಯ ಡಾ.ಕೆ. ಶಿವಕುಮಾರ್ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದರು. ಆದ್ರೆ ಲಕ್ಷ್ಮಮ್ಮ ಗರ್ಭಿಣಿಯಾಗಿ 2020ರ ಜನವರಿ 26ರಂದು ಮೂರನೇ ಮಗುವಿಗೆ ಜನ್ಮ ನೀಡಿದ್ದರು.

ವೈದ್ಯರು ತಮಗೆ ಸರಿಯಾಗಿ ಶಸ್ತ್ರಚಿಕಿತ್ಸೆ ಮಾಡಿಲ್ಲ, ಹೀಗಾಗಿ ಸೂಕ್ತ ಪರಿಹಾರ ನೀಡಬೇಕು ಎಂದು 2021ರ ಫೆಬ್ರವರಿ 17ರಂದು ಗ್ರಾಹಕರ ಆಯೋಗಕ್ಕೆ ಅವರು ದೂರು ನೀಡಿದ್ದರು/ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಎನ್. ಕುಮಾರಿ ಮೀನಾ, ವೈದ್ಯರ ಸೇವಾ ನಿರ್ಲಕ್ಷದಿಂದ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು, ಮಹಿಳೆಯ ಅನುಭವಿಸಿದ ಹಿಂಸೆಗೆ 30 ಸಾವಿರ ರೂ., ದೂರಿನ ಖರ್ಚು 25 ಸಾವಿರ ರೂ. ಸೇರಿ ಒಟ್ಟು 55 ಸಾವಿರ ರೂ. ದಂಡ ವಿಧಿಸುವಂತೆ ಇದೇ ಡಿಸೆಂಬರ್ 5ರಂದು ಆದೇಶ ನೀಡಿದ್ದಾರೆ.

Leave A Reply