Rajya Sabha: ಕಾಂಗ್ರೆಸ್ ಸಂಸದ ಮನುಸಿಂಘ್ವಿ ಆಸನದಡಿ 500 ನೋಟುಗಳ ಕಂತೆ ಪತ್ತೆ ಪ್ರಕರಣ – ಕೊನೆಗೂ ಮೌನ ಮುರಿದ ಸಂಸದ ಮನುಸಿಂಘ್ವಿ

Rajya Sabha: ದೆಹಲಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಅಧಿವೇಶನದ ವೇಳೆ ತೆಲಂಗಾಣದಿಂದ ಚುನಾಯಿತರಾಗಿರುವ ಕಾಂಗ್ರೆಸ್ ಸಂಸದ (Congress MP) ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಅವರಿಗೆ ನಿಗದಿಪಡಿಸಲಾದ ಸೀಟ್ ಸಂಖ್ಯೆ 222 ಅಡಿಯಲ್ಲಿ 500ರ ನೋಟುಗಳ ಪತ್ತೆಯಾದ (Cash found from Parliament Seat) ಅಚ್ಚರಿಯ ಘಟನೆ ಸಂಸತ್‌ನಲ್ಲಿ ನಡೆದಿದೆ. ಇದು ಕೋಲಾಹಾಲಕ್ಕೆ ಕಾರಣವಾಗಿದೆ. ಸಭಾಧ್ಯಕ್ಷರು ಈ ವಿಚಾರದ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಈ ಬೆನ್ನಲ್ಲೇ ಅಭಿಷೇಕ್ ಮನು ಸಿಂಘ್ವಿ ದುಡ್ಡು ಪತ್ತೆಯಾದ ವಿಚಾರದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಈ ಬಗ್ಗೆ ಪ್ರತಿಕ್ರೀಯಿಸಿದ ಅಭಿಷೇಕ್ ಮನು ಸಿಂಘ್ವಿ ಅವರು, ‘ಹಣ ಪತ್ತೆಯಾದ ಬಗ್ಗೆ ತಿಳಿದಾಗ ಸ್ವತಃ ನಾನೇ ಆಶ್ಚರ್ಯಚಕಿತನಾಗಿದ್ದೇನೆ. ನನಗೆ ಇದರ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ವೀಡಿಯೋವೊಂದರಲ್ಲಿ ಮಾತನಾಡಿರುವ ಅವರು, ಈ ಬಗ್ಗೆ ಕೇಳಿ ನನಗೆ ಆಶ್ಚರ್ಯವಾಗಿದೆ. ನಿನ್ನೆ ಮಧ್ಯಾಹ್ನ 12.57ಕ್ಕೆ ಸದನದ ಒಳಗೆ ತಲುಪಿದ್ದೆ. ಮಧ್ಯಾಹ್ನ 1 ಗಂಟೆಗೆ ಸದನ ಏರಿತು. ಮಧ್ಯಾಹ್ನ 1 ರಿಂದ 1.30ರ ವರೆಗೆ ನಾನು ಅಯೋಧ್ಯೆ ಸಂಸದ ಅವದೇಶ್ ಪ್ರಸಾದ್ ಅವರೊಂದಿಗೆ ಕ್ಯಾಂಟೀನ್‌ನಲ್ಲಿ ಕುಳಿತು ಊಟ ಮಾಡಿದೆ. ನಾನು ಮಧ್ಯಾಹ್ನ 1.30ಕ್ಕೆ ಸಂಸತ್ತನ್ನು ಬಿಟ್ಟೆ. ಹೀಗಾಗಿ ನಿನ್ನೆ ಸದನದಲ್ಲಿ ಒಟ್ಟು 3 ನಿಮಿಷ, ಕ್ಯಾಂಟೀನ್‌ನಲ್ಲಿ 30 ನಿಮಿಷ ಇದ್ದೆ. ಇಂತಹ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿರುವುದು ನನಗೆ ವಿಚಿತ್ರವೆನಿಸುತ್ತದೆ. ಸಹಜವಾಗಿ ಜನರು ಎಲ್ಲಿಯಾದರೂ ಮತ್ತು ಯಾವುದೇ ಆಸನದಲ್ಲಿ ಏನನ್ನು ಇರಿಸಬಹುದು ಎಂಬುದರ ಕುರಿತು ತನಿಖೆ ನಡೆಯಬೇಕು ಎಂದಿದ್ದಾರೆ.

ಅಲ್ಲದೆ ಇದರರ್ಥ ನಮಗೆ ಇರುವ ಆಸನವನ್ನು ಲಾಕ್ ಮಾಡಬಹುದು, ಲಾಕ್‌ ಮಾಡಿ ಸಂಸದರೇ ತಮ್ಮೊಂದಿಗೆ ಕೀಲಿ ತೆಗೆದುಕೊಂಡು ಹೋಗಬಹುದು. ಏಕೆಂದರೆ ಎಲ್ಲರೂ ಅಸನದ ಮೇಲೆ ಕುಳಿತು ಏನು ಬೇಕಾದರೂ ಮಾಡಬಹುದು, ಇದರಿಂದ ಆರೋಪಗಳನ್ನು ಮಾಡಬಹುದು. ಆದ್ರೆ ಮಾಡುವಂತರ ಆರೋಪಗಳು ಗಂಭೀರವಾಗಿಲ್ಲದಿದ್ದಾಗ ನಗೆಪಾಟಲಿಗೀಡಾಗುತ್ತದೆ. ಘಟನೆ ಕುರಿತು ನಾನು ಭದ್ರತಾ ಏಜೆನ್ಸಿಗಳಿಗೆ ಮನವಿ ಮಾಡುತ್ತೇನೆ. ಏನಾದ್ರೂ ಲೋಪವಿದ್ದರೆ ಅದನ್ನು ಸಹ ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಈ ವಿಚಾರವನ್ನು ಇಟ್ಟುಕೊಂಡು ಆಡಳಿತ ಪಕ್ಷಗಳು ಪ್ರತಿಪಕ್ಷದ ವಿರುದ್ಧ ಹರಿಹಾಯ್ದಿವೆ. ಅಲ್ಲದೆ ರಾಜ್ಯಸಭೆಯ ಸಭಾಪತಿ ಜಗದೀಪ್ ಧಂಖರ್ ಅವರು ಶುಕ್ರವಾರ ಸದನಕ್ಕೆ ಮಾಹಿತಿ ನೀಡಿದ್ದು, ಸಾಮಾನ್ಯ ವಿಧ್ವಂಸಕ-ವಿರೋಧಿ ಪರಿಶೀಲನೆಯ ಸಂದರ್ಭದಲ್ಲಿ, ಕಾಂಗ್ರೆಸ್ ಸಂಸದ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಹಂಚಿಕೆ ಮಾಡಲಾದ ಸೀಟ್ ಸಂಖ್ಯೆ 222 ರಿಂದ ಕರೆನ್ಸಿ ನೋಟುಗಳ ಬಂಡಲ್ ಪತ್ತೆಯಾಗಿದೆ. ಸದ್ಯ ಈ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.