Belagavi: ವಿಧಾನಮಂಡಲ ಚಳಿಗಾಲದ ಅಧಿವೇಶನ; ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ವಿಮಾನ ಸೇವೆ

Belagavi: ಡಿ.9 ರಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನಮಂಡಲಿ ಚಳಿಗಾಲ ಅಧಿವೇಶನ ಆರಂಭವಾಗಲಿರುವ ಕಾರಣ ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲಾಗಿದೆ.

ಡಿ.9 ರಿಂದ 19 ರವರೆಗೆ ಬೆಂಗಳೂರು-ಬೆಳಗಾವಿ ನಡುವೆ ಇಂಡಿಗೊ ಏರ್‌ಲೈನ್ಸ್‌ ಸಂಸ್ಥೆ ವಿಶೇಷ ವಿಮಾನ ಸಂಚಾರ ಆರಂಭಿಸಲಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರು, ಶಾಸಕರು, ಸರಕಾರದ ಅಧಿಕಾರಿಗಳು ಈ ಅಧಿವೇಶನದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಾರೆ. ಹೀಗಾಗಿ ಅವರಿಗೆ ಅನುಕೂಲಕ್ಕಾಗಿ ವಿಶೇಷ ವಿಮಾನ ಕಲ್ಪಿಸಲಾಗಿದೆ.

ವಿಮಾನ ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು 7 ಗಂಟೆಗೆ ಬೆಳಗಾವಿ ತಲುಪಲಿದೆ. ಬೆಳಿಗ್ಗೆ 7.30 ಕ್ಕೆ ಬೆಳಗಾವಿಯಿಂದ ಹೊರಟು 8.30ಕ್ಕೆ ಬೆಂಗಳೂರು ತಲುಪಿದೆ. 189ಆಸನಗಳನ್ನು ಹೊಂದಿದೆ.

Leave A Reply

Your email address will not be published.