Viral Video : ಕೋಳಿ, ಕುರಿ ಅಲ್ಲಾ ಗುರೂ… ಒಂಟೆಯ ಕೈಕಾಲು ಕಟ್ಟಿ ಲಗೇಜ್ ರೀತಿ ಬೈಕ್ ನಲ್ಲಿ ಸಾಗಿಸಿದ ಕಿರಾತಕರು!! ವಿಡಿಯೋ ವೈರಲ್, ನೆಟ್ಟಿಗರು ಕಿಡಿ ಕಿಡಿ
Viral Video : ನಾವು ಬೈಕಿನಲ್ಲಿ ಹೋಗುವಾಗ ಒಮ್ಮೊಮ್ಮೆ ನಮ್ಮ ಜೊತೆಗೆ ಕೋಳಿ, ಕುರಿ, ಮೇಕೆಗಳನ್ನು ಹಿಡಿದುಕೊಂಡು ಹೋಗುತ್ತೇವೆ. ಹಳ್ಳಿ ಭಾಗಗಳಲ್ಲಿ ಇದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದಿಬ್ಬರು ಆಸಾಮಿಗಳು ತಮ್ಮ ಬೈಕಿನಲ್ಲಿ ಒಂಟೆಯನ್ನು ಕೂರಿಸಿಕೊಂಡು ಹೋದಂತಹ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
View this post on Instagram
ಹೌದು, ಇಬ್ಬರು ವ್ಯಕ್ತಿಗಳು 8-9 ಅಡಿ ಎತ್ತರದ ಒಂಟೆಯನ್ನು ಬೈಕಿನಲ್ಲಿ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಂಟೆಯನ್ನು ಕಟ್ಟಿಹಾಕಿ ಬೈಕಿನಲ್ಲಿ ಸಾಗಿಸುತ್ತಿರುವುದನ್ನು ಕಾಣಬಹುದು. ಒಂಟೆ ತಕಿರುಚಾಡುತ್ತಾ ಬೈಕ್ ನಲ್ಲಿ ಕಾಲುಮುದುರಿಕೊಂಡು ಈ ಇಬ್ಬರು ಅಸಾಮಿಗಳ ನಡುವೆ ಕೂತಿದೆ. ಈ ಕೃತ್ಯದ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೊ(Viral Video ) ದಲ್ಲಿ, ಇಬ್ಬರು ಬೈಕ್‍ನಲ್ಲಿ ಒಂಟೆಯೊಂದರ ಕಾಲುಗಳನ್ನು ಕಟ್ಟಿಕೊಂಡು ಕೂರಿಸಿದ್ದಾರೆ. ಹಿಂದೆ ಕುಳಿತ ವ್ಯಕ್ತಿ ಒಂಟೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಬೈಕ್ ಮುಂದೆ ಸಾಗುವಾಗ ಒಂಟೆ ಕೂಗುತ್ತಾ ಸವಾರಿ ಮಾಡಿದೆ. ಈ ಅಸಾಮಾನ್ಯ ದೃಶ್ಯವನ್ನು ಕಂಡು ದಾರಿಹೋಕರು ಆಶ್ಚರ್ಯಗೊಂಡಿದ್ದಾರೆ. ಒಂಟೆಯನ್ನು ಬೈಕ್‍ನಲ್ಲಿ ಕಟ್ಟಿಕೊಂಡು ಸಾಗಿಸುವುದು ನಂಬಲಾಗದ ವಿಚಾರವಾಗಿದೆ. ಹಾಗಾಗಿ ಈ ದೃಶ್ಯ ಎಲ್ಲರಿಗೂ ವಿಚಿತ್ರವಾಗಿ ಕಂಡಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊಗೆ ಅನೇಕರು ನಾನಾ ಬಗೆಯ ಕಮೆಂಟನ್ನು ಮಾಡಿದ್ದಾರೆ. ಪ್ರಾಣಿ ಹಿಂಸೆ ಮಾಡುತ್ತಿರುವುದಕ್ಕೆ ಕೆಲವರು ಮರುಗಿದರೆ ಮತ್ತೆ ಕೆಲವರು ಪ್ರಾಣಿ ದಯಾ ಸಂಘಕ್ಕೆ ಕಂಪ್ಲೇಂಟ್ ನೀಡಿ ಕಮೆಂಟಿಸಿದ್ದಾರೆ.