Pepper : ನಿರಂತರ ಇಳಿಕೆ ಕಂಡಿದ್ದ ಕಾಳು ಮೆಣಸು ದರದಲ್ಲಿ ದೀಢೀರ್ ಏರಿಕೆ!!
Pepper : ಚಿನ್ನದ ಬೆಲೆ ಎಂದೇ ಪರಿಗಣಿಸಲ್ಪಟ್ಟಿರುವ ಕಾಳು ಮೆಣಸು ದರದಲ್ಲಿ ಕೆಲವು ಸಮಯದಿಂದ ಇಳಿಕೆ ಕಂಡಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಕಾಳುಮೆಣಸು ದರ ಏರಿಕೆಯತ್ತ ಮುನ್ನಡೆದಿದೆ.
ಹೌದು, ಕಾಳುಮೆಣಸು(Peppar) ಧಾರಣೆ ಮತ್ತೆ ಚೇತರಿಕೆ ಕಾಣುವ ಲಕ್ಷಣ ಕಾಣಿಸಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಸದ್ಯವೇ ಕೆ.ಜಿ.ಗೆ 650 ರೂ. ಗಡಿ ದಾಟುವ ನಿರೀಕ್ಷೆ ಇದೆ. ಡಿ.5ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕಾಳುಮೆಣಸು ಧಾರಣೆ ಕೆ.ಜಿ.ಗೆ 640 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 650 ರೂ. ತನಕ ಬೇಡಿಕೆ ಇತ್ತು.
ಇನ್ನು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ನ.25ರಂದು 610 ರೂ., ನ.26ಕ್ಕೆ 615 ರೂ., ನ.30ರಂದು 620 ರೂ., ಡಿ.3ರಂದು 625 ರೂ., ಡಿ.4ರಂದು 630 ರೂ., ಡಿ.5ರಂದು 640 ರೂ.ಗೆ ತಲುಪಿತು. ಕಳೆದ ಮೂರು ದಿನಗಳಿಂದ ಧಾರಣೆ ಏರಿಕೆಯತ್ತ ಸಾಗುತ್ತಿದೆ.