Frog Venom: ಹೀಗೊಂದು ಆಧ್ಯಾತ್ಮಿಕ ಶುದ್ಧೀಕರಣ! ಕಪ್ಪೆಯ ವಿಷ ಸೇವಿಸಿ ನಟಿ ಸಾವು!
Frog Venom: ಆಧ್ಯಾತ್ಮಿಕ ಶುದ್ಧೀಕರಣ ಎಂಬ ಒಂದು ಪರಿಕಲ್ಪನೆ ಎಷ್ಟು ಸರಿ ಎನ್ನುವುದು ತರ್ಕಕ್ಕೆ ನಿಲುಕದ ವಿಚಾರ. ಹಾಗಿರುವಾಗ ಆಧ್ಯಾತ್ಮಿಕ ಶುದ್ಧೀಕರಣ ಆಚರಣೆಯ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ʻಕಂಬೋʼ ಜಾತಿಗೆ ಸೇರಿದ ಕಪ್ಪೆಯ ವಿಷ (Frog Venom) ಸೇವಿಸಿ ನಟಿ ಪ್ರಾಣ ಕಳೆದುಕೊಂಡಿದ್ದಾರೆ.
ಹೌದು, ಆಧ್ಯಾತ್ಮಿಕ ಶುದ್ಧೀಕರಣ ಆಚರಣೆಯ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಮೆಕ್ಸಿಕನ್ ಶಾರ್ಟ್ ಫಿಲಂ ನಟಿ ಮಾರ್ಸೆಲಾ ಅಲ್ಕಾಜರ್ ರೊಡ್ರಿಗಸ್ (36) (Marcela Alcazar Rodriguez) ಸಾವನ್ನಪ್ಪಿದ್ದಾರೆ. ಈಕೆ ʻಕಾಂಬೋ’ ಎಂಬ ದಕ್ಷಿಣ ಅಮೆರಿಕಾದ (South American) ಆಧ್ಯಾತ್ಮಿಕ ಶುದ್ಧೀಕರಣ ಸಮಾರಂಭದಲ್ಲಿ ನಟಿ ಭಾಗವಹಿಸಿದ್ದರು. ಈ ಆಚರಣೆಯು ಕಪ್ಪೆ ವಿಷವನ್ನು (Frog Venom) ಸೇವಿಸುವುದನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮದಲ್ಲಿ ಶುದ್ಧೀಕರಣದ ಭಾಗವಾಗಿ ಈ ಕಪ್ಪೆಯ ನೀರನ್ನು ಎಲ್ಲರಿಗೂ ನೀಡಲಾಗಿತ್ತು. ಆದ್ರೆ ಈ ಕಪ್ಪೆ ನೀರು ತುಂಬಾನೆ ವಿಷಕಾರಿ. ಈ ಕಾರ್ಯಕ್ರಮದಲ್ಲಿ ಕಪ್ಪೆಯ ನೀರು ನೀಡಿ ಇದನ್ನು ಕುಡಿದರೆ ದೇಹದಲ್ಲಿನ ಗಾಯಗಳು, ದೇಹ ಶುದ್ಧಿಗೆ ಸಹಕಾರಿಯಾಗುತ್ತದೆ ಎಂದು ನಂಬಲಾಗಿತ್ತು. ವಿಷಕಾರಿ ಕಪ್ಪೆ ಅಮೇಜಾನ್ ಕಾಡುಗಳಲ್ಲಿ ಮಾತ್ರವೇ ಕಂಡುಬರುತ್ತದೆ. ಹಾಗೆ ಇದನ್ನು ಹಿಡಿದು ತಂದು ನೀರಿನಲ್ಲಿ ಬಿಟ್ಟಿರುತ್ತಾರೆ.
ಮೊದಲು 1 ಲೀಟರ್ ಕಪ್ಪೆ ನೀರನ್ನು ಕುಡಿಯಲು ಹೇಳಲಾಗುತ್ತದೆ. ಇದಾದ ಬಳಿಕ ದೇಹದ ಮೇಲೆ ಸಣ್ಣದಾಗಿ ತೂತು ಮಾಡಲಾಗುತ್ತದೆ. ಅದಕ್ಕೆ ಕಪ್ಪೆಯ ಲೋಳೆಯನ್ನು ಹಚ್ಚಿ ಪ್ರಾರ್ಥನೆ ಮಾಡಲಾಗುತ್ತದೆ. ಈ ನಟಿಗೂ ಕೂಡ ಇದೇ ವಿಧಾನದಲ್ಲಿ ನೀರು ಕುಡಿಸಿ ಅನಂತರ ಲೋಳೆಯನ್ನು ಕೈ ಮೇಲೆ ಹಾಕಲಾಗಿತ್ತು.