Guruprasad : ಕೊನೆಗೂ ಬಯಲಾಯ್ತು ನಿರ್ದೇಶಕ ಗುರುಪ್ರಸಾದ್ ಸಾವಿನ ರಹಸ್ಯ – ಪೊಲೀಸ್ ತನಿಖೆಯಲ್ಲಿ ಶಾಕಿಂಗ್ ಸತ್ಯ ರವಿಲ್
Guruprasad : ಕನ್ನಡದ ಹಿರಿಯ ಕಲಾವಿದ, ನಟ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ನಿನ್ನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದೀಗ ಅವರ ಸಾವಿನ ನಿಜ ಕಾರಣ ಬಯಲಾಗಿದೆ.
ಹೌದು, ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗತ್ತು. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಈ ಸಾವಿನ ಹಿಂದೆ ಹಲವಾರು ಅನುಮಾನ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅವರ ಎರಡನೇ ಪತ್ನಿ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಆದರೆ ಇದೀಗ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಸಂಬಂಧಿಸಿ ನಡೆಸಿದ್ದ ತನಿಖೆಯಲ್ಲಿ ಶಾಕಿಂಗ್ ವಿಷಯವೊಂದು ಹೊರಬಂದಿದೆ..
ವೇಳೆ ಗುರುಪ್ರಸಾದ್ ಅವರ ಮೊಬೈಲ್‌ನಲ್ಲಿದ್ದ ಮೇಸೆಜ್‌ಗಳನ್ನು ರಿಟ್ರೈವ್ ಮಾಡಿದ್ದಾರೆ. ಆದರೆ ಯಾವುದೇ ಅನುಮಾನಾಸ್ಪದ ಮೆಸೆಜ್ ಕಂಡುಬಂದಿಲ್ಲ. ಬದಲಿಗೆ ಅವರು ಆನ್‌ಲೈನ್‌ಲ್ಲಿ ರಮ್ಮಿ ಆಡುವ ಚಟಕ್ಕೆ ಬಿದ್ದಿದ್ದರು ಎನ್ನುವ ಆಘಾತಾಕಾರಿ ವಿಷಯ ಹೊರಬಂದಿದೆ. ರಮ್ಮಿಯಲ್ಲಿ ಹಣ ಮಾಡುವ ಹುಚ್ಚಿಗೆ ಬಿದ್ದಿದ್ದ ಗುರುಪ್ರಸಾದ್ ಅವರು, ಸಿನಿಮಾ ಹೆಸರಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅದನ್ನು ರಮ್ಮಿಗೆ ಬಳಕೆ ಮಾಡಿಕೊಂಡಿದ್ದರು. ರಮ್ಮಿಯಿಂದಲೇ 1 ಕೋಟಿಗೂ ಹೆಚ್ಚು ಹಣ ಕಳೆದಿರುವುದು ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೇ ಅದೇ ಸಮಯಕ್ಕೆ ಗುರುಪ್ರಸಾದ್ರ ಕೊನೆಯ ಚಿತ್ರ ರಂಗನಾಯಕ ಕೂಡ ಫ್ಲಾಪ್ ಆಗಿತ್ತು. ಇದರಿಂದಾಗಿ ಸಾಲ ಕೊಟ್ಟವರು ಗುರುಪ್ರಸಾದ್ ಹಿಂದೆ ಬಿದ್ದಿದ್ದರು. ಈ ಎಲ್ಲಾ ಹಣವನ್ನು ರಮ್ಮಿಯಿಂದಲೇ ತೀರಿಸುತ್ತೇನೆ ಎಂದು ಹಠಕ್ಕೆ ಬಿದ್ದು ಮತ್ತೆ ಮತ್ತೆ ಹೂಡಿಕೆ ಮಾಡಿ ಕಳೆದುಕೊಂಡು ಆತ್ಮಹತ್ಯೆ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಗುರುಪ್ರಸಾದ್ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂದೆಲ್ಲ ಕೆಲವರು ಹೇಳುತ್ತಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡೇ ಸಾವಿಗೀಡ್ ಆಗಿದ್ದಾರೆ ಎಂಬ ಸತ್ಯ ಬಯಲಾಗಿದೆ. ಮಾದನಾಯಕನಹಳ್ಳಿಯ ಅಪಾರ್ಟ್ಮೆಂಟ್ನ ಬಾಡಿಗೆ ಫ್ಲ್ಯಾಟ್ನಲ್ಲಿ ಫ್ಯಾನಿಗೆ ಗುರುಪ್ರಸಾದ್ ನೇಣು ಹಾಕಿಕೊಂಡಿದ್ದರಿಂದ ದೇಹ ಉಸಿರುಗಟ್ಟಿ ಮರಣಹೊಂದಿದ್ದಾರೆ ಎಂದು ಮರಣೋತ್ತರ ವರದಿ ಹೇಳಿದೆ. ಆತ್ಮಹತ್ಯೆ ಸ್ಥಳದ ಸುತ್ತಲು ಕೆಟ್ಟ ವಾಸನೆ ಮಾತ್ರವಲ್ಲ, ದೇಹದ ನರಗಳೆಲ್ಲವೂ ಊತಕೊಂಡ ಸ್ಥಿತಿ, ನೇಣುಬಿಗಿದುಕೊಂಡ ನಂತರದಲ್ಲಿ ಗುರುಪ್ರಸಾದ್ ರಕ್ತ ವಾಂತಿ ಮಾಡಿಕೊಂಡಿದ್ದರು ಎಂಬ ಸಂಗತಿ ಬಯಲಾಗಿದೆ. ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿ 78 ಗಂಟೆಗಳು ಕಳೆದಿವೆ ಎಂಬ ಅಂಶವೂ ವಿಕ್ಟೋರಿ ಆಸ್ಪತ್ರೆ ನೀಡಿರುವ ವರದಿಯಿಂದ ಹೊರಬಿದ್ದಿದೆ.