Kalburagi: PUC ವಿದ್ಯಾರ್ಥಿನಿ ಆತ್ಮಹತ್ಯೆ !!

Kalburagi: ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಗೋದುತಾಯಿ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ.

ಕಲಬುರಗಿ(Kalburagi) ನಗರದ ಗೋದುತಾಯಿ ಕಾಲೇಜಿನ ವಸತಿ ನಿಲಯದಲ್ಲಿ ಆಳಂದ ಪಟ್ಟಣದ ನಿವಾಸಿ ಬಾಷಾ ಮಕಾಂದರ್ ಅವರ ಮಗಳು ನಮೀರಾ ಸರ್ವಾತ್ (18) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ

ಪಿಯುಸಿ ಸೈನ್ಸ್ ನಲ್ಲಿ ಓದುತ್ತಿರುವ ನಮೀರಾ ಇಂದು(ಬುಧವಾರ) ಆಳಂದ ಪಟ್ಟಣದಿಂದ ಕಲಬುರಗಿಗೆ ಬಂದಿದ್ದಳು, ಗೋದುತಾಯಿ ಹಾಸ್ಟೆಲ್ ಗೆ ಬಂದು ಬಳಿಕ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಾಳೆ. ಬಳಿಕ ಸಹಚರ ವಿದ್ಯಾರ್ಥಿನಿಯರು ಕಾಲೇಜಿಗೆ ಕರೆದಾಗ ತಾನು ಆಮೇಲೆ ಬರುತ್ತೇನೆ ಎಂದು ಹೇಳಿದ್ದಳು ಎನ್ನಲಾಗಿದೆ. ನಂತರ ರೂಮಿನಲ್ಲಿ ಯಾರೂ ಇರದೇ ಇದ್ದಾಗ ಆತ್ಮಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

1 Comment
  1. Maximum earnings says

    Maximum earnings https://www.zkusadasiescort.com/ Earnings from inflation – You can’t earn from inflation.

Leave A Reply

Your email address will not be published.