Arecanut: ಅಡಿಕೆ ದರದಲ್ಲಿ ಭರ್ಜರಿ ಏರಿಕೆ!!

Share the Article

Arecanut: ಕೆಲವು ದಿನಗಳ ಹಿಂದೆ ಅಡಿಕೆ(Arecanut) ದರದಲ್ಲಿ ಕುಸಿತ ಕಂಡಿತ್ತು, ಆದರೆ ಈಗ ಅಡಿಕೆ ದರ ಚೇತರಿಕೆಯನ್ನು ಕಂಡಿದೆ. ಹೀಗಾಗಿ ಅಡಿಕೆ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿ ಬಂದಿದೆ.

ಹೌದು, 55 ಸಾವಿರ ರೂಪಾಯಿಗೆ ತಲುಪಿದ್ದ ಅಡಿಕೆ ದರ ಇದ್ದಕ್ಕಿದ್ದ ಹಾಗೇ 44 ಸಾವಿರಕ್ಕೆ ಬಂದು ನಿಂತಿತ್ತು. ಇದು ಅಡಿಕೆ ಬೆಳೆಗಾರರಿಗೆ ಶಾಕ್ ಆಗಿತ್ತು. ಈಗ ಸ್ವಲ್ಪ ಸುಧಾರಿಸಿಕೊಳ್ಳುವ ಹಂತ ತಲುಪಿದೆ. ಭದ್ರಾವತಿಯ ರಾಶಿ ಅಡಿಕೆ 50,300 ರೂಪಾಯಿಗೆ ಮಾರಾಟವಾಗಿದೆ. ಇನ್ನು ಶಿವಮೊಗ್ಗ ಮಾರುಕಟ್ಟೆಯಲ್ಲಿ ಕನಿಷ್ಠ 31,400 ರೂಪಾಯಿ ಇದ್ದ ಅಡಿಕೆ ಗರಿಷ್ಠ 49,899 ರೂಒಅಯಿಗೆ ಮಾರಾಟವಾಗಿದೆ. ಉಳಿದಂತೆ ಸರಕು ಅಡಿಕೆ ಕ್ವಿಂಟಾಲ್ ಗೆ 48,000 ರೂಪಾಯಿ ಇತ್ತು. ಆದರೆ 80,210 ರೂಪಾಯಿ ಆಗಿದೆ.

ಇನ್ನು ಶಿವಮೊಗ್ಗ ಬೆಟ್ಟೆ ಅಡಿಕೆ ಕನಿಷ್ಠ 52,114 ಇದ್ದು ಗರಿಷ್ಠ 57,629 ಮಾರಾಟವಾಗಿದೆ. ರಾಶಿ ಅಡಿಕೆ ಕನಿಷ್ಠ 31,400 ಇದ್ದು ಗರಿಷ್ಠ 49,899 ಮಾರಾಟವಾಗಿದೆ‌. ಸರಕು ಅಡಿಕೆ ಕನಿಷ್ಠ 48,000 ಇದ್ದು ಗರಿಷ್ಠ 80,210 ಮಾರಾಟವಾಗಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ 45,000 ಇದ್ದು ಗರಿಷ್ಠ 50,799 ಮಾರಾಟವಾಗಿದೆ.

Leave A Reply