Kundapura: ಮದುವೆಗೆ ಎರಡು ದಿನ ಇರುವಾಗ ವರ ನಾಪತ್ತೆ

Kundapura: ಮದುವೆ ನಿಗದಿಪಡಿಸಿದ್ದ ಯುವಕನೋರ್ವ ನಾಪತ್ತೆಯಾಗಿರುವ ಘಟನೆಯೊಂದು ಕುದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಗೆ ಕೆಲವೇ ದಿನ ಇರುವಾಗ ತಾಯಿಗೆ ಹುಷಾರವಿಲ್ಲವೆಂದು ಹೇಳಿ ನಾಪತ್ತೆಯಾಗಿದ್ದು, ಇದೀಗ ಹುಡುಗಿ ಮನೆಯವರು ಆತಂಕಗೊಂಡಿದ್ದಾರೆ. ಕಾರ್ತಿಕ್‌ (28) ಎಂಬಾತನೇ ನಾಪತ್ತೆಯಾದ ಯುವಕ.

ಈತನಿಗೆ ಕೋಟೇಶ್ವರ ಗ್ರಾಮದ ಜಯಲಕ್ಷ್ಮೀ ಎಂಬ ಯುವತಿಯ ಜೊತೆ ಮದುವೆ ನಿಗದಿಯಾಗಿತ್ತು. ಹಾಗಾಗಿ ಡಿ.5 ರಂದು ಮದುವೆ ನಿಶ್ಚಯವಾಗಿತ್ತು. ಜು.16 ಮದುವೆ ನೋಂದಣಿ ಕೂಡಾ ಮಾಡಲಾಗಿತ್ತು. ಆದರೆ ಈತ ನ.27 ರಂದು ಜಯಲಕ್ಷ್ಮೀಗೆ ಕರೆ ಮಾಡಿದ್ದು, ತಾನು ಕೋಟೇಶ್ವರದಲ್ಲಿದ್ದೇನೆ. ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದೆ ಎಂದು ಹೇಳಿದ್ದಾನೆ.

ಆದರೆ ಅನಂತರ ವಾಪಸ್ಸು ಬಾರದೇ, ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿ ನಾಪತ್ತೆಯಾಗಿದ್ದಾರೆ ಎಂದು ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೋಧಿ ಮೈ ಬಣ್ಣ, ಎಡಗೈ ಮೇಲೆ ಮಾರ್ಕ್‌, ಬಲಕಿವಿಯಲ್ಲಿ ಚಿನ್ನದ ರಿಂಗ್‌, ಎತ್ತರ 5.6 ಅಡಿ ಎಂದು ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

Leave A Reply

Your email address will not be published.