Hassan: ಆಹಾರ ಸಚಿವ ಮುನಿಯಪ್ಪ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತ

Hassan: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್‌.ಮುನಿಯಪ್ಪ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಗಿದೆ. ಹಿಂಬದಿಯಿಂದ ಬರುತ್ತಿದ್ದ ಇನೋವಾ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುನಿಯಪ್ಪ ಅವರು ಹಾಸನದಲ್ಲಿ ಜನಕಲ್ಯಾಣ ಸಮಾವೇಶಕ್ಕೆ ಪ್ರಯಾಣ ಮಾಡುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ 75 ಶಾಂತ್ರಿಗ್ರಾಮದ ಟೋಲ್‌ ಬಳಿ ಈ ಘಟನೆ ನಡೆದಿದೆ.

ಸಚಿವರ ಕಾರು ಈ ಅಪಘಾತದಿಂದ ಜಖಂಗೊಂಡಿದೆ. ನಂತರ ಸಚಿವರು ಬದಲಿ ವಾಹನದ ಮೂಲಕ ಸಮಾವೇಶಕ್ಕೆ ಬಂದಿದ್ದಾರೆ.

Leave A Reply

Your email address will not be published.