Waqf Property: ಬಿಜೆಪಿ ಆಡಳಿತ ಇದ್ದಾಗ 4000 ವಕ್ಫ್ ಖಾತೆ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ

Waqf Property: ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ಮೇಲುಗೈ ಸಾಧಿಸಲು ವಕ್ಫ್ ಬಗ್ಗೆ (Waqf Property) ಮಾತನಾಡುತ್ತಾ ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಜನರನ್ನು ಯಾಮಾರಿಸಲು ಮಾಡುತ್ತಿರುವ ಹೋರಾಟವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಹೌದು, ಗದಗ ನಗರದ ತೋಂಟದಾರ್ಯ ಮಠದ ಆವರಣದಲ್ಲಿನ ಶಿವಾನುಭವ ಮಂಟಪದಲ್ಲಿ ತೋಂಟದಾರ್ಯ ಮಠ, ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯ ಮೂಲಕ ಪ್ರಕಟಗೊಂಡ ಸಂತರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಂದಾಯ ಸಚಿವರು ಈ ಹಿಂದೆ ರಾಜಕೀಯಕ್ಕೆ ಬರುವವರು ಸೇವೆ ಮಾಡಬೇಕು. ಬಡವರಿಗೆ ನೋಂದವರಿಗೆ ಧ್ವನಿಯಾಗಬೇಕು ಎಂದು ಬರುತ್ತಿದ್ದರು. ಈಗ ರಾಜಕೀಯ ಬರುವವರು ಏನೆಲ್ಲ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಡಿ.ಆರ್.ಪಾಟೀಲ ಅವರಂತಹ ಹಿರಿಯರು, ತತ್ವ, ಸಿದ್ದಾಂತ, ನಿಷ್ಠೆಯ ಬದುಕು ಮಾದರಿಯಾಗಿದೆ ಎಂದರು.