Government Employees: ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ನ್ಯೂ ಇಯರ್ ಗಿಫ್ಟ್?!

Government Employees: ಸರ್ಕಾರಿ ನೌಕರರಿಗೆ (Government Employees) ಕೇಂದ್ರ ಸರ್ಕಾರ ಹೊಸ ವರ್ಷದ ಮೊದಲು ಗಿಫ್ಟ್ ನೀಡಲು ಮುಂದಾಗಿದ್ದು, ಬಾಕಿ ಉಳಿದಿರುವ 18 ತಿಂಗಳ ಡಿಎ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

 

ಹೌದು, ಇತ್ತೀಚೆಗೆ ಬಾಕಿ ಇರುವ ಡಿಎಗಳ ಬಗ್ಗೆ ಚರ್ಚೆಯಾಗುತ್ತಿದೆ. ಬಜೆಟ್ 2025ರಲ್ಲಿ ಬಾಕಿ ಉಳಿದಿರುವ 18 ತಿಂಗಳ ಡಿಎ ಮತ್ತು ಡಿಆರ್ ಬಗ್ಗೆ ಪ್ರಕಟಣೆಯ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕರೋನಾ ಸಮಯದಲ್ಲಿ ಇಡೀ ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ನೌಕರರ ಡಿಎ ಮೊತ್ತವನ್ನ ಕಲ್ಯಾಣ ಯೋಜನೆಗಳಿಗೆ ಮತ್ತು ಬಡ ಜನರಿಗೆ ಸಹಾಯ ಮಾಡಲು ಬಳಸಲಾಯಿತು.
ಕೋವಿಡ್ ಬಿಕ್ಕಟ್ಟಿನಿಂದ ಚೇತರಿಸಿಕೊಂಡ ನಂತರ ಕೇಂದ್ರವು ಬಾಕಿ ಉಳಿದಿರುವ ಡಿಎಗಳನ್ನು ಬಿಡುಗಡೆ ಮಾಡುತ್ತದೆ ಎಂದು ನೌಕರರು ಹೇಳಿದ್ದರೂ, ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಮುಖ್ಯವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಜನವರಿ 2020, ಜುಲೈ 2020, ಜನವರಿ 2021 ಡಿಎಗಳು ಬಾಕಿ ಉಳಿದಿವೆ. ಅಂದಿನಿಂದ ನೌಕರರ ಸಂಘಗಳು ಈ ಬಾಕಿ ಪಾವತಿಗೆ ಒತ್ತಾಯಿಸುತ್ತಲೇ ಬಂದಿವೆ. ಈ ಕಾರಣ ರಾಷ್ಟ್ರೀಯ ಮಂಡಳಿ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಅವರು ಬಾಕಿ ಇರುವ ಡಿಎಗಳನ್ನ ಪಾವತಿಸುವಂತೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಪ್ರಸ್ತುತ ದೇಶ ಆರ್ಥಿಕವಾಗಿ ಪ್ರಗತಿಯಲ್ಲಿದ್ದು, ಬಾಕಿ ಇರುವ ಡಿಎಗಳ ಬಗ್ಗೆ ಕೇಂದ್ರ ನಿರ್ಧಾರ ಕೈಗೊಂಡರೆ ನೌಕರರ ಖಾತೆಗೆ 2 ಲಕ್ಷ ರೂ.ವರೆಗೆ ಜಮೆಯಾಗಲಿದೆ ಎನ್ನಲಾಗಿದೆ. ಅದರಲ್ಲೂ ಮೂರು ಕಂತುಗಳಲ್ಲಿ ಪಾವತಿ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಬಂದಿಲ್ಲ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಮುಂದಿನ ವರ್ಷ ಡಿಎ ಹೆಚ್ಚಳ, ಹೊಸ ವೇತನ ಆಯೋಗ ರಚನೆ ಮತ್ತು ಬಾಕಿ ಇರುವ ಡಿಎಗಳ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.