Basavanagouda Patil Yatnal ಮುಂದಿನ ರಾಜಕೀಯ ಭವಿಷ್ಯದ ಕುರಿತು ಸ್ಫೋಟಕ ಭವಿಷ್ಯ ನೋಡಿದ ಲಿಂಗಾಯತ ಸ್ವಾಮೀಜಿ!!

Basavanagouda Yatnal: ಬಿಜೆಪಿ ನಾಯಕ ಹಿಂದುತ್ವದ ಫೈಯರ್ ಬ್ರಾಂಡ್ ಬಸವನಗೌಡ ಪಾಟೀಲ್ ಯತ್ನಾಳ್ ಅವರ ರಾಜಕೀಯ ಭವಿಷ್ಯದ ಹುಲಸೂರು ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿ (Sri Sivananda Swamiji )ಅವರು ಮಹತ್ವದ ಭವಿಷ್ಯ ನುಡಿದಿದ್ದಾರೆ.

ಬಸವನಗೌಡ ಪಾಟೀಲ್ ಯತ್ನಾಳ್(Basavanagouda Patil yatanal)ಅವರು ಬಿಜೆಪಿಯ ನಾಯಕರ ವಿರುದ್ಧ ಬಂಡೆದ್ದಿರುವುದು ಎಲ್ಲರಿಗೂ ತಿಳಿದಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಸಿಡಿದೆದ್ದು ಕೆಲವು ಹೋರಾಟಗಳ ಹಾದಿಯನ್ನು ಕೈಗೊಂಡಿದ್ದಾರೆ. ಹೀಗಾಗಿ ಸ್ವಪಕ್ಷದ ನಾಯಕರೆ ಅವರಿಗೆ ವಿರುದ್ಧವಾಗಿ ನಿಂತಿದ್ದಾರೆ. ಆದರೆ ಈ ಬೆನ್ನಲ್ಲೇ ಕೆಲವು ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಕೂಡ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಜಗದ್ಗುರು ಬಸವಣ್ಣನವರ ಕುರಿತು ಯತ್ನಾಳ್ ಹೇಳಿದ ಆ ಒಂದು ಹೇಳಿಕೆ.

ಹೌದು, ನವಂಬರ್ 25ರಂದು ನಡೆದಿದ್ದ ವಕ್ಫ್​ ವಿರುದ್ಧದ ಪಾದಯಾತ್ರೆ ವೇಳೆ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಕ್ಫ್​ ಬೋರ್ಡ್​​ ವಿರುದ್ಧ ಎಲ್ಲರೂ ಕೂಡಿ ಹೋರಾಟ ಮಾಡಬೇಕಿದೆ. ನಾವು ಹೋರಾಟಕ್ಕೆ ಇಳಿದರೆ ಅವರು ಕೂಡ ಹೋರಾಟ ಮಾಡುತ್ತಾರೆ. ವಿಜಯೇಂದ್ರ ಬಣದವರು ಹೋರಾಟ ಮಾಡುತ್ತಾರೆ, ಬೆಂಕಿ ಹಚ್ಚುತ್ತಾರೆ. ಅವರು ನಮ್ಮ ನಡುವೆಯೇ ಜಗಳ ಹಚ್ಚುತ್ತಾರೆ, ನಾವು ಹೆದರಬಾರದು. ಹೆದರಿದರೆ ಬಸವಣ್ಣನವರ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ರಾಜಕೀಯ ನಾಯಕರು ಹಾಗೂ ಸ್ವಾಮೀಜಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಯತ್ನಾಳ್ ಹೇಳಿಕೆಯನ್ನು ಎಲ್ಲರೂ ತೀವ್ರವಾಗಿ ಖಂಡಿಸಿದ್ದರು.

ಆದರೆ ಈಗ ಹುಲಸೂರು ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿ (Sri Sivananda Swamiji )ಅವರು ‘ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಾಪಸ್ ಪಡೆಯದೇ ಇದ್ರೆ ಮುಂದಿನ ಸಲ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagouda Patil Yatnal) ಸೋಲು ಖಚಿತ, ಒಂದು ವೇಳೆ ಅವರು ಸೋಲದೆ ಇದ್ರೆ ನಾನು ನನ್ನ ಮಠ ತ್ಯಾಗ ಮಾಡುತ್ತೇನೆ ಎಂದು ಬಸವಕಲ್ಯಾಣದಲ್ಲಿ ಬಹಿರಂ ಸವಾಲ್ ಹಾಕಿದ್ದಾರೆ.

ಅಲ್ಲದೆ ಯತ್ನಾಳ್‌ಗೆ ಮಾನ ಮರ್ಯಾದೆ ಇದ್ರೆ ಲಿಂಗಾಯತರಲ್ಲಿ ಕ್ಷೆಮೆ ಕೇಳಬೇಕು. ಇಲ್ಲಾವಾದ್ರೆ ರಾಜ್ಯದ ಲಿಂಗಾಯತರು (Lingayats) ಇಲ್ಲಿಂದ ಯತ್ನಾಳ್‌ರನ್ನು ಓಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡೋರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಹೆಸರು ಮಾತ್ರ ಬಸವರಾಜ ಆದ್ರೆ ನೀನು ಬೆಂಕಿ ಹಚ್ಚುವ ಬಸವರಾಜ. ಬಸವಣ್ಣನವರು ಸೇರಿದಂತೆ ಎಲ್ಲರ ಬಗ್ಗೆ ಹಗುರವಾಗಿ ಮತಾನಾಡುತ್ತಿದ್ದು, ಯತ್ನಾಳ್‌ ತಾನೊಬ್ಬನೇ ತೀಸ್ಮರ್ಕಾ ಎಂದು ತಿಳಿದುಕೊಂಡಿದ್ದಾನೆ ಎಂದು ಲೇವಡಿ ಮಾಡಿದ್ದಾರೆ.

Leave A Reply

Your email address will not be published.