Golden Temple: ಗೋಲ್ಡನ್‌ ಟೆಂಪಲ್‌ ಬಳಿ ಮಾಜಿ ಡಿಸಿಎಂ ಮೇಲೆ ಗುಂಡಿನ ದಾಳಿ; ವೀಡಿಯೋ ವೈರಲ್ ‌

Golden Temple: ಅಮೃತಸರದ ಗೋಲ್ಡನ್‌ ಟೆಂಪಲ್‌ ಪ್ರವೇಶದ್ವಾರದಲ್ಲಿ ಪಂಜಾಬ್‌ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಸೇರಿದಂತೆ ಶಿರೋಮಣಿ ಅಕಾಲಿದಳದ ನಾಯಕರು ‘ಸೇವೆ’ ನಡೆಸುತ್ತಿದ್ದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ನಡೆದ ಈ ಗುಂಡಿನ ದಾಳಿಯಲ್ಲಿ ಸುಖಬೀರ್ ಸಿಂಗ್ ಬಾದಲ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

 

ಮಾಜಿ ಭಯೋತ್ಪಾದಕ ನಾರಾಯಣ ಸಿಂಗ್ ಚೌಡಾ ಎಂಬಾತ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಸ್ವಲ್ಪದರಲ್ಲೇ ಇವರು ಪಾರಾಗಿದ್ದು, ಸುರಕ್ಷಿತರಾಗಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಜಾಗರೂಕತೆ ತೋರಿ ನಾರಾಯಣ್ ಚೌರಾ ಅವರನ್ನು ಹಿಡಿದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಡಿಸಿಪಿ ಹರ್ಪಾಲ್ ಸಿಂಗ್ ಅವರು, ಬಲವಾದ ಭದ್ರತಾ ವ್ಯವಸ್ಥೆಗಳಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.