Putturu : ಜೋರಾದ ಮಳೆಯ ಅಬ್ಬರ- ಸಿಡಿಲು ಬಡಿದು ಯುವಕ ಸಾವು

Putturu : ಸಿಡಿಲು ಬಡಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಫೆಂಗಲ್ ಚಂಡಮಾರುತದ ಅಬ್ಬರ ಜೋರಾಗಿದೆ. ಚಂಡಮಾರುತದ ಆರ್ಭಟಕ್ಕೆ ತಮಿಳುನಾಡು ಮಾತ್ರವಲ್ಲದೆ ರಾಜ್ಯಾದ್ಯಂತ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಅಂತೇ ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಬಾರಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಸೇರಿದಂತೆ ದ.ಕನ್ನಡ ಜಿಲ್ಲೆಯ ಕೆಲವು ಕಡೆ ಕೃತಕ ನೆರೆ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಇದೀಗ ಪುತ್ತೂರಿನಲ್ಲಿ(Putturu ) ಸಿಡಿಲು ಓರ್ವ ಯುವಕನನ್ನು ಬಲಿ ಪಡೆದಿದೆ.

ಮೃತ ವ್ಯಕ್ತಿಯನ್ನು ಕೆಯ್ಯೂರು ನಿವಾಸಿ ನಾರಾಯಣ (25) ಇಂದು ಗುರುತಿಸಲಾಗಿದೆ. ಮನೆಯ ಮುಂಭಾಗದ ಶೀಟ್ ನಲ್ಲಿ ಬಲ್ಬ್ ಹೊತ್ತುತ್ತಿಲ್ಲ ಎಂದು ಸರಿಪಡಿಸುತ್ತಿದ್ದ ಸಂದರ್ಭ ಸಿಡಿಲು ಬಡಿದು ನೆಲಕ್ಕೆ ಕುಸಿದು ಬಿದ್ದ ನಾರಾಯಣ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತರಾಯಲಿತಾದರೂ ಅವರು ದಾರಿ ಮದ್ಯೆ ಮೃತಪಟ್ಟಿದ್ದರು. ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.

Leave A Reply

Your email address will not be published.