Maharastra: ಆಕಾಶದಿಂದ ರೈತರ ಹೊಲಕ್ಕೆ ಬಿತ್ತು ನಿಗೂಢ ವಸ್ತು – ಅದರಲ್ಲಿ ಏನಿತ್ತು ಗೊತ್ತೇ?
Maharastra: ಮಹಾರಾಷ್ಟ್ರದಲ್ಲಿ , ಮೋಡ ಕವಿದ ವಾತಾವರಣದ ನಡುವೆ ಆಕಾಶದಿಂದ ಬಲೂನ್ ತರಹದ ವಸ್ತುವೊಂದು ರೈತರೊಬ್ಬರ ಹೊಲಕ್ಕೆ ಬಂದು ಬಿದ್ದಿದೆ.
ಹೌದು, ಮಹಾರಾಷ್ಟ್ರದ(Maharastra) ಚಿಖಲಿ ತಾಲೂಕಿನ ಅಂಚರವಾಡಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಡಿಸೆಂಬರ್ 2 ಸೋಮವಾರದಂದು ಮೋಡ ಕವಿದ ವಾತಾವರಣದ ಮಧ್ಯೆ ಅಂಚರವಾಡಿಯ ಸಂಜಯ್ ಸೀತಾರಾಮ ಪರಿಹಾರ್ ಎಂಬವರ ಹೊಲಕ್ಕೆ ಕೊರಿಯನ್ ಭಾಷೆಯ ಬರಹಗಳಿದ್ದ ಈ ನಿಗೂಢ ಸಾಧನವೊಂದು ರೈತರೊಬ್ಬರ ಹೊಲಕ್ಕೆ ಬಿದ್ದಿದೆ. ಈ ನಿಗೂಢ ವಸ್ತುವನ್ನುನೋಡಲು ಜನ ದೌಡಾಯಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ವಿಚಾರ ಭಾರಿ ಸದ್ದು ಮಾಡುತ್ತಿದೆ.
ಸಂಜಯ್ ಪರಿಹಾರ್ ಅವರ ಮಗ ಅವಿನಾಶ್ ಮತ್ತು ಸೋದರ ಸಂಬಂಧಿ ವೈಭವ್ ಜೊತೆ ಎಂದಿನಂತೆ ಹೊಲಕ್ಕೆ ಬಂದ ವೇಳೆ ಈ ನಿಗೂಢ ವಸ್ತುವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಹತ್ತಿರಕ್ಕೆ ಹೋಗಿ ಪರಿಶೀಲಿಸಿದಾಗ ಕೊರಿಯನ್ ಭಾಷೆಯ ಅಕ್ಷರಗಳಿದ್ದಂತಹ ಸಾಧನವನ್ನು ದೊಡ್ಡ ಬಲೂನ್‌ಗೆ ಜೋಡಿಸಿರುವುದನ್ನು ಗಮನಿಸುತ್ತಾರೆ. ತಕ್ಷಣ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ಈ ನಿಗೂಢ ವಸ್ತುವನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಹೊಲದ ಬಲಿ ದೌಡಾಯಿಸಿದ್ದಾರೆ.
ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಕಂದಾಯ ಇಲಾಖೆ ತನಿಖೆ ನಡೆಸಿ ಸಾಧನವನ್ನು ವಶಕ್ಕೆ ಪಡೆದಿದ್ದಾರೆ. ಸಾಧನ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ. ಕೊರಿಯನ್ ಭಾಷೆಯ ಅಕ್ಷರಗಳಿರುವ ಈ ಸಾಧನ ಹವಾಮಾನಕ್ಕೆ ಸಂಬಂಧಿಸಿದ ಸಾಧನವಾಗಿದೆ ಎಂದು ಊಹಿಸಲಾಗಿದೆ. ಆದರೆ ಈ ಸಾಧನ ಇಲ್ಲಿಗೆ ಹೇಗೆ ಬಂತು ಮತ್ತು ಅದರ ಉದ್ದೇಶ ಏನು ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ry6lkw