Bangalore: ತುಳುನಾಡಿನ ಸಂಸ್ಕೃತಿಗೆ ಮತ್ತೊಮ್ಮ ಅವಮಾನ; ಜಮೀರ್ ಅಹ್ಮದ್ ಕೈ ಹಿಡಿದು ವೇದಿಕೆಗೆ ಕರೆತಂದ ಪಂಜುರ್ಲಿ

Bangalore: ಚಾಮರಾಜಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಂಜುರ್ಲಿ ದೈವದ ಪಾತ್ರವನ್ನು ರೂಪಿಸಿ ಸಚಿವ ಜಮೀರ್ ಅಹ್ಮದ್ ಅವರನ್ನು ವೇದಿಕೆಗೆ ಕರೆತರುವ ಒಂದು ಘಟನೆ ನಡೆದಿದೆ. ಇದು ತೀವ್ರ ಟೀಕೆಗೆ ಗುರಿಯಾಗಿದೆ.
ಇಷ್ಟು ಮಾತ್ರವಲ್ಲದೇ ಕಾಂತಾರ ಸಿನಿಮಾದ ಹಾಡನ್ನು ಬಳಕೆ ಮಾಡಿ ಜಮೀರ್ ಅವರ ಕೈ ಹಿಡಿದು ವೇಷಧಾರಿಗಳು ನರ್ತನ ಮಾಡಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ದೈವ ನಂಬಿಕೆಗೆ ಇದು ಅಪಚಾರ ಮಾಡಿದಂತೆ ಆಗಿದೆ. ಕರಾವಳಿಗರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.
ತುಳುನಾಡಿನ ಸಂಸ್ಕೃತಿ, ಭಕ್ತಿ ಪರಂಪರೆಯ ಅಣುಕು ಪ್ರದರ್ಶನವನ್ನು ಈ ರೀತಿ ಪ್ರದರ್ಶಿಸಿ ಅಗೌರವ ಮಾಡಲಾಗುತ್ತಿದೆ ಎಂಬ ಆಕ್ರೋಶ ತುಳುವರು ವ್ಯಕ್ತಪಡಿಸುತ್ತಿದ್ದಾರೆ.