Gujarath : 34 ವರ್ಷದ ಬಿಜೆಪಿ ಯುವ ನಾಯಕಿ ಆತ್ಮಹತ್ಯೆ !!

Gujarath: ಗುಜರಾತ್‌ನ ಸೂರತ್‌ನಲ್ಲಿ 34 ವರ್ಷದ ಬಿಜೆಪಿ ಮುಖಂಡರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಾಯಕಿಯನ್ನು ದೀಪಿಕಾ ಪಟೇಲ್ ಎಂದು ಗುರುತಿಸಲಾಗಿದೆ.
ಸೂರತ್‌ನ ವಾರ್ಡ್ ನಂ. 30ರಲ್ಲಿ ದೀಪಿಕಾ ಪಟೇಲ್ ಬಿಜೆಪಿ(BJP)ಯ ಮಹಿಳಾ ಮೋರ್ಚಾದ ನಾಯಕಿಯಾಗಿದ್ದರು. ಅವರು ತಮ್ಮ ಪತಿ, ರೈತ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಆಕೆಗೆ ಏನು ತೊಂದರೆಯಾಗಿದೆ ಎಂಬುದನ್ನು ಕಂಡುಹಿಡಿಯಲು ನಾವು ಎಲ್ಲಾ ಕೋನಗಳನ್ನು ಅನ್ವೇಷಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ದೀಪಿಕಾ ಪಟೇಲ್(Deepika Patel)ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಾಗ ಪಕ್ಕದ ಕೋಣೆಯಲ್ಲಿ ೧೩, ೧೪ ಮತ್ತು ೧೬ ವರ್ಷದ ಮಕ್ಕಳು ಇದ್ದರು. ವಿಚಾರಣೆ ವೇಳೆ ಕುಟುಂಬದ ಸದಸ್ಯರ ಬಗ್ಗೆ ಯಾವುದೇ ಅನುಮಾನ ವ್ಯಕ್ತವಾಗಿಲ್ಲ. ಅಲ್ಲದೇ ಅವರಿಗೆ ಆತ್ಮಹತ್ಯೆಯ ಸುಳಿವು ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಕೂಡಲೇ ಪಾಲಿಕೆಸದಸ್ಯ ಚಿರಾಗ್ ಸೋಲಾಂಕಿ ಹಾಗೂ ಕುಟುಂಬದ ಸದಸ್ಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ನೇಣುಬಿಗಿದುಕೊಂಡ ಪರಿಣಾಮ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.