Kashi: ಕಾಶಿ ದೇವಾಲಯದ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿದ ಮಹಿಳೆ – ದೇಶಾದ್ಯಂತ ಭಕ್ತರ ಭಾರಿ ಆಕ್ರೋಶ!!

Share the Article

Kashi: ಇಂದಿನ ಜನಾಂಗಕ್ಕೆ ರೀಲ್ಸ್ ಹುಚ್ಚು ಎಷ್ಟರ ಮಟ್ಟಿಗೆ ಇದೆ ಎಂದರೆ ಯಾವ ಸ್ಥಳದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ಸಾಮಾನ್ಯ ಜ್ಞಾನವೂ ಜನರಲ್ಲಿ ಇಲ್ಲದಂತಾಗಿದೆ ಎಂಬಂತಾಗಿದೆ, ಎಲ್ಲಿ ಹೋದರೂ ಒಂದು ಸೆಲ್ಫಿ ಅಥವಾ ರೀಲ್ಸ್ ಇಷ್ಟು ಬಿಟ್ಟರೆ ಜೀವನದಲ್ಲಿ ಬೇರೇನೂ ಬೇಡ ಅನ್ನುವಂತಾಗಿದೆ. ಅದಕ್ಕೆ ಇಲ್ಲೊಬ್ಬಳು ಲಲಲಾಮಣಿ ಉದಾಹರಣೆಯಾಗಿದ್ದಾಳೆ. ಯಾಕೆಂದರೆ ಈಕೆ ಕಾಶಿ(kashi) ದೇವಸ್ಥಾನದ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಿ, ರಿಯಲ್ಸ್ ಮಾಡಿ ಫೋಟೋ ತೆಗೆದುಕೊಂಡಿದ್ದಾಳೆ.

ಹೌದು, ಮಹಿಳೆಯೊಬ್ಬಳು ತನ್ನ ಹುಟ್ಟು ಹಬ್ಬದವನ್ನು ವಾರಣಾಸಿಯ ಪ್ರಸಿದ್ಧ ದೇವಾಲಯವಾದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಆಚರಿಸಿಕೊಂಡಿರುವುದು ಅಷ್ಟು ಮಾತ್ರ ಆದರೆ ತೊಂದರೆ ಇರಲಿಲ್ಲ ಮಹಿಳೆ ದೇವರ ದರ್ಶನ ಪಡೆದು ಗರ್ಭಗುಡಿಯಲ್ಲೇ ಅರ್ಚಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ದೇವರಿಗೆ ಸಮರ್ಪಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಅಲ್ಲದೆ ಮಹಿಳೆ ಹಾಗೂ ದೇವಳದ ಅರ್ಚಕರ ವಿರುದ್ಧ ನೆಟ್ಟಿಗರು ಕೆರಳುವಂತೆ ಮಾಡಿದೆ.

ವಿಡಿಯೊದಲ್ಲಿ ಏನಿದೆ?
ಮಹಿಳೆಯ ಹೆಸರು ಮಮತಾ ರೈ ಎಂದು ಹೇಳಲಾಗಿದೆ. ಈಕೆ ಸೋಷಿಯಲ್‌ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌. ಹುಟ್ಟುಹಬ್ಬದ ನಿಮಿತ್ತ ಉತ್ತರ ಪ್ರದೇಶದ ವಾರಾಣಸಿಯ ಕಾಲ ಭೈರವ ಸ್ವಾಮಿ ಮಂದಿರಕ್ಕೆ ಭೇಟಿ ನೀಡಿದ್ದರು. ಗರ್ಭಗುಡಿಯಲ್ಲಿ ದೇವರ ಎದುರೇ ಕ್ಯಾಂಡಲ್‌ ಹಚ್ಚಿ, ಕೇಕ್‌ ಇಡಲಾಗಿತ್ತು. ದೇಗುಲದಲ್ಲಿದ್ದ ಅರ್ಚಕರೊಬ್ಬರು ಮಹಿಳೆ ಕುತ್ತಿಗೆಗೆ ತುಳಸಿ ಅಥವಾ ಪತ್ರೆಯ ಮಾಲೆ ಹಾಕುತ್ತಾರೆ..ಹಣೆಗೆ ಏನೋ ಹಚ್ಚುತ್ತಾರೆ. ಬಳಿಕ ಆ ಮಹಿಳೆ ಕೇಕ್‌ ಕತ್ತರಿಸುತ್ತಾರೆ. ಅದರಲ್ಲಿ ಒಂದು ತುಂಡು ತೆಗೆದು ಮೊದಲು ದೇವರ ವಿಗ್ರಹದ ಎದುರು ಇಡುತ್ತಾರೆ. ನಂತರ ಮಹಿಳೆ ಅಲ್ಲಿಂದ ಹೋಗೋದನ್ನ ವಿಡಿಯೊದಲ್ಲಿ ನೋಡಬಹುದು. ಈ ಘಟನೆ ಶುಕ್ರವಾರ ನಡೆದಿದೆ ಎನ್ನಲಾಗಿದ್ದು, ಅಂದಿನಿಂದಲೂ ಭಾರಿ ವೈರಲ್‌ ಆಗುತ್ತಿದೆ.

ಆಕೆ ದೇವರ ವಿಗ್ರಹದ ಎದುರು ಕೇಕ್‌ ಕಟ್‌ ಮಾಡಿ, ಯಾರೂ ಮಾಡದ್ದನ್ನ ತಾನು ಮಾಡಿದೆ ಎಂಬಂತೆ ಅಲ್ಲಿಂದ ಹೋಗಿದ್ದಾರೆ. ವಿಡಿಯೋ ದಲ್ಲಿ ಕೇಕ್ ಕತ್ತರಿಸಿದ ಮಹಿಳೆ ಒಂದು ತುಂಡು ಕೇಕ್ ಅನ್ನು ದೇವರಿಗೆ ಸಮರ್ಪಿಸಿದ್ದೂ ಕಾಣಬಹುದು ಅಲ್ಲದೆ ದೇವಳದ ಅರ್ಚಕರೂ ಅಲ್ಲೇ ಇರುವುದು ಕಾಣಬಹುದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಡಿಯೊ ವೈರಲ್‌ ಆಗುತ್ತಿದ್ದಂತೆ ಅನೇಕಾನೇಕರು ಕಿಡಿಕಾರಿದ್ದಾರೆ. ಗರ್ಭಗುಡಿಯಲ್ಲಿ ಕೇಕ್‌ ಕಟ್‌ ಮಾಡಿದ್ದಕ್ಕೆ ಮಹಿಳೆಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಇದುವರೆಗೆ ಎಲ್ಲೂ ಯಾರೂ ದೇವಸ್ಥಾನದ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ವಿವರವೇ ಇಲ್ಲ ಇದು ಅಹಂಕಾರದ ಪರಮಾವಧಿ ಅಲ್ಲದೆ ದೇವಳದ ಅರ್ಚಕರೂ ಇದಕ್ಕೆ ಸಮ್ಮತಿ ನೀಡಿರುವುದು ವಿಷಾಧನೀಯ ಎಂದು ನೆಟ್ಟಿಗರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

Leave A Reply