Ganga Kalyana Scheme: ನಿಮ್ಮ ಕೃಷಿ ಜಮೀನಿಗೆ ಉಚಿತವಾಗಿ ಬೋರ್ʼವೆಲ್ ಹಾಕಿಸಬೇಕೆ? ಹಾಗಿದ್ರೆ ಈ ರೀತಿ ಅರ್ಜಿ ಸಲ್ಲಿಸಿ, ಪ್ರಯೋಜನ ಪಡೆಯಿರಿ
Ganga Kalyana Scheme: ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಸಹಾಯಧನ ನೀಡುತ್ತಿದ್ದು, ಅರ್ಹರಿಂದ ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅರ್ಜಿಯನ್ನು ಆಹ್ವಾನಿಸಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಜಮೀನಿನಲ್ಲಿ ಬೋರ್ವೆಲ್ ಕೊರೆಸುವುದರ ಜತೆಗೆ ಪಂಪ್ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಸಹಾಯಧನವನ್ನು ನೀಡುತ್ತಲಿದೆ.
ಈ ಗಂಗಾ ಯೋಜನೆಯಡಿಯಲ್ಲಿ ಒಟ್ಟು 1.5 ಲಕ್ಷ ರೂಪಾಯಿಯಿಂದ 3.50 ಲಕ್ಷ ರೂಪಾಯಿಗಳವರೆಗೆ ರೈತರು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ. ಅಲ್ಲದೇ ಗಂಗಾ ಕಲ್ಯಾಣ ಯೋಜನೆಯಡಿ ಈಗ ಅರ್ಹ ಸಣ್ಣ ಹಾಗೂ ಅತಿ ಸಣ್ಣ ರೈತರು (ಅಂದರೆ 1.20 ಎಕರೆಯಿಂದ 5 ಎಕರೆ ವರೆಗೆ ಜಮೀನು ಹೊಂದಿರುವವರು) ಬೋರ್ವೆಲ್ ಕೊರೆಸಲು ಅವಕಾಶ ಇದೆ.
ಈ ಯೋಜನೆ ಬಗ್ಗೆ ಗೊಂದಲಗಳಿದ್ದರೆ, ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಲ್ಯಾಣ ಮಿತ್ರ 24×7 ಸಹಾಯವಾಣಿ 9482300400 ಅಥವಾ ಸೋಷಿಯಲ್ ಮೀಡಿಯಾ X ಖಾತೆ @SWDGok ಗೆ ಸಂಪರ್ಕ ಮಾಡಬಹುದು.