Bangalore: ಬೆಕ್ಕು ಮೂತ್ರ ವಿಸರ್ಜಿಸಿದ್ದಕ್ಕೆ ಹಲ್ಲೆ; ಯುವಕನ ಮೇಲೆ ಬಿತ್ತು ಕೇಸು
Bangalore: ವ್ಯಕ್ತಿಯೊಬ್ಬರು ಬೆಕ್ಕಿನ ಮರಿ ಮೂತ್ರ ಮಾಡಿತೆಂದು ಹಲ್ಲೆ ಮಾಡಿದ ಕಾರಣಕ್ಕೆ ಪ್ರಕರಣ ದಾಖಲಾಗಿದೆ. ಬೆಕ್ಕಿನ ಮರಿ ಮೂತ್ರ ಮಾಡಿದೆ ಎಂದು ಕಾಲಿನಿಂದ ಒದ್ದು, ಗಾಯ ಮಾಡಲಾಗಿದೆ ಎಂದು ಆರೋಪ ಮಾಡಿ ಯುವಕನ ವಿರುದ್ಧ ಪ್ರಕರಣವೊಂದು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೊಹಮ್ಮದ್ ಅಫ್ತಾಬ್ ಎಂಬುವವರು ದೂರು ನೀಡಿದ್ದಾರೆ. ಮನೀಶ್ ರತ್ನಾಕರ್ ಎಂಬುವವರೇ ಆರೋಪಿ. ಬಿಟಿಎಂ ಲೇಔಟ್ ಎರಡನೇ ಹಂತದಲ್ಲಿ ಒಂದೇ ಮನೆಯಲ್ಲಿ ದೂರುದಾರ ಹಾಗೂ ಆರೋಪಿ ವಾಸಮಾಡುತ್ತಿದ್ದರು. ನ.26 ರಂದು ಮನೀಶ್ ರತ್ನಾಕರ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಬೆಕ್ಕು ಮೂತ್ರ ಮಾಡಿದ್ದು, ಮನೀಶ್ ಕಾಲಿನಿಂದ ಬೆಕ್ಕಿಗೆ ಒದ್ದಿದ್ದಾರೆ.
ನಂತರ ಆರೋಪಿ ಮೊಹಮ್ಮದ್ ಅಫ್ತಾಬ್‌ಗೆ ಕರೆ ಮಾಡಿದ್ದು, ʼ ಬೆಕ್ಕು ಮನೆಯಲ್ಲಿ ಗಲೀಜು ಮಾಡಿದ್ದು, ಅದನ್ನು ಬಿಸಾಡುʼ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಗೆ ಬಂದ ಮೊಹಮ್ಮದ ಅಫ್ತಾಬ್ ಬೆಕ್ಕು ಬಕೆಟ್‌ನಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದ್ದನ್ನು ಗಮನಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಸೆಕ್ಷನ್ 325 ರಡಿ ಎಫ್‌ಐಆರ್ ದಾಖಲಾಗಿದೆ.