Udupi: ಗುಮ್ಮಲ ಡ್ಯಾಂನಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು!!
Udupi: ಉಡುಪಿ ಜಿಲ್ಲೆಯ ಕುಂದಾಪುರ(Kundapura) ತಾಲೂಕಿನ ಬೆಳ್ವೆಯ ಗುಮ್ಮಲ ಡ್ಯಾಂನಲ್ಲಿಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಶ್ರೀಶ (13) ಹಾಗೂ ಜಯಂತ್ (19) ಎಂದು ಗುರುತಿಸಲಾಗಿದೆ. ರಜೆ ಹಿನ್ನೆಲೆಯಲ್ಲಿ ಗೆಳೆಯರ ಜೊತೆಗೆ ಇಬ್ಬರು ಈಜಲು ಹೋಗಿದ್ದರು. ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.