New Year 2025: ನ್ಯೂಇಯರ್‌ಗೆ ಪೊಲೀಸರು ಅಲರ್ಟ್! ರೆಸಾರ್ಟ್‌, ಏರ್ಪೋರ್ಟ್‌, ರೈಲ್ವೆ ನಿಲ್ದಾಣಗಳ ಮೇಲೆ ನಿಗಾ!

New Year 2025: ಹೊಸ ವರ್ಷಕ್ಕೆ (New Year 2025) ಇನ್ನೇನು ಒಂದು ತಿಂಗಳಷ್ಟೇ ಬಾಕಿ ಇದೆ. ಆದ್ರೆ ಈ ಬಗ್ಗೆ ಸಿಸಿಬಿ ಪೊಲೀಸರು ಈಗಾಗಲೇ ಅಲರ್ಟ್ ಆಗಿದ್ದಾರೆ.

ಹೌದು, ಮಹಾನಗರಿ ಬೆಂಗಳೂರಿಗೆ ದೊಡ್ಡ ಮಟ್ಟದಲ್ಲಿ ಮಾದಕ ವಸ್ತುಗಳು ಬರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದ್ದು, ಈ ಮಾಹಿತಿ ಆಧರಿಸಿ ಬೆಂಗಳೂರು ಸಿಸಿಬಿ ಪೊಲೀಸರು (Bengaluru CCB Police), ನಗರದ ಪ್ರತಿಷ್ಟಿತ ಹೋಟೆಲ್‌ಗಳು, ಹೊರವಲಯದ ಫಾರಂ ಹೌಸ್‌ಗಳು, ರೆಸಾರ್ಟ್‌ಗಳ ಮೇಲೆ ತೀವ್ರ ನಿಗಾವಹಿಸಿದ್ದಾರೆ.
ಅಷ್ಟೇ ಅಲ್ಲದೇ, ಏರ್‌ಪೋರ್ಟ್‌ಗಳು, ರೈಲ್ವೇ ನಿಲ್ದಾಣಗಳು, ಬಸ್ ನಿಲ್ದಾಣಗಳು, ಬೇರೆ ರಾಜ್ಯಗಳಿಂದ ನಗರಕ್ಕೆ ಬರುವ ರಾಷ್ಟೀಯ ಹೆದ್ದಾರಿಗಳಲ್ಲಿ ಗಮನ ಹರಿಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಇದರ ಜೊತೆಗೆ ಹೊಸ ವರ್ಷಾಚರಣೆಗೆ ಈಗಾಗಲೇ ಬುಕ್ಕಿಂಗ್ ಕೂಡ ಓಪನ್ ಆಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ನ್ಯೂ ಇಯರ್ ವೇಳೆ ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಗೈಡ್‌ಲೈನ್ಸ್‌ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ.

4 Comments
  1. Avtoservis_jvMi says

    Исправим все проблемы с вашим автомобилем в Москве, с гарантией качества и низкими ценами.
    Автосервисы в москве и области http://crabcar.ru/ .

  2. Josephhem says

    this post Sollet.io wallet

  3. Jasonriz says
Leave A Reply

Your email address will not be published.