Bengaluru : 17 ವರ್ಷದ ವಿದ್ಯಾರ್ಥಿನಿಯನ್ನು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ- ದೈಹಿಕ ಶಿಕ್ಷಕ ಅರೆಸ್ಟ್
ರಾಜ್ಯದ ಜನರು ಬೆಚ್ಚಿ ಬೀಳುವಂತೆ ದೈಹಿಕ ಶಿಕ್ಷಕನೊಬ್ಬನು ತನ್ನ ವಿದ್ಯಾರ್ಥಿನಿಯ ಮೇಲೆಯೇ ಕೀಚಕ ಕೃತ್ಯವೆಸಗಿದ್ದಾನೆ. 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವಂತ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಬಾಸ್ ಪೇಟೆಯಲ್ಲಿ ನಡೆದಿದೆ.
17 ವರ್ಷದ ಬಾಲಕಿ ಮೇಲೆ ದೈಹಿಕ ಶಿಕ್ಷಕ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. 22 ವರ್ಷದ ದೈಹಿಕ ಶಿಕ್ಷಕ ದಾದಾಪೀರ್ ಕೃತ್ಯವೆಸಗಿದ ಆರೋಪಿ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಂದಹಾಗೆ ಆರೋಪಿಯು ಬಾಲಕಿಯನ್ನು ನಂಬಿಸಿ ದೇವರಾಯನದುರ್ಗ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದು, ನಂತರ ತುಮಕೂರಿಗೆ ಕರೆದುಕೊಂಡು ಹೋಗಿದ್ದಾನೆ. ತುಮಕೂರಿನ ಲಾಡ್ಜ್ ವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. 10 ದಿನದ ನಂತರ ಮತ್ತೆ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಗ್ಗೆ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ದೈಹಿಕ ಶಿಕ್ಷಕನ ಕಾಟ ಹೆಚ್ಚಾದಂತೆ ಬಾಲಕಿ ಪೋಷಕರಿಗೆ ತಿಳಿಸಿದ್ದಾರೆ. ಇದೀಗ ಪೋಷಕರು ದಬಾಸ್ ಪೇಟೆ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ದೈಹಿಕ ಶಿಕ್ಷಕನನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ದೂರು ಆಧರಿಸಿ ದೈಹಿಕ ಶಿಕ್ಷಕನ ಬಂಧಿಸಲಾಗಿದ್ದು, ದಾಬಸ್ ಪೇಟೆ ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.