Death: ಬಸ್ಸು ಚಲಿಸುತ್ತಿದ್ದಾಗ ಬಾಯಲ್ಲಿದ್ದ ಪಾನ್ ಉಗುಳಲು ಹೋಗಿ ವ್ಯಕ್ತಿ ಭೀಕರ ಸಾವು!

Death: ಬಸ್ಸು ಚಲಿಸುತ್ತಿದ್ದಾಗ ಬಾಯಲ್ಲಿದ್ದ ಪಾನ್ ಉಗುಳಲು ಹೋಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೌದು, ಪೂರ್ವಾಂಚಲ್ ಎಕ್ಸ್ಪ್ರೆಸ್ ವೇ ಮೂಲಕ ಬಸ್ ಹೋಗುತ್ತಿರುವಾಗ ಬಾಯಲ್ಲಿದ್ದ ಪಾನ್ ಉಗುಳಲು ಬಾಗಿಲು ಬಾಗಿಲು ತೆರೆದ ಕಾರಣ 45 ವರ್ಷದ ಪ್ರಯಾಣಿಕ ಬಸ್ನಿಂದ ಬಿದ್ದು ಸಾವನ್ನಪ್ಪಿದ್ದಾರೆ (Death) .

ಈ ಘಟನೆಯು ಎಕ್ಸ್‌ಪ್ರೆಸ್‌ವೇಯ 93-ಕಿಮೀ ಮೈಲಿಗಲ್ಲಿನಲ್ಲಿ ಬೆಳಗ್ಗೆ 10.30 ರ ಸುಮಾರಿಗೆ ಬಸ್ ಅಜಂಗಢದಿಂದ ಲಕ್ನೋಗೆ ತೆರಳುತ್ತಿದ್ದಾಗ ಸಂಭವಿಸಿದೆ. ಬಸ್ ಬಾಲ್ದಿರೈ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹಿ ಗ್ರಾಮದ ಬಳಿ ತಲುಪುತ್ತಿದ್ದಂತೆ, ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ಬಸ್‌ನ ಬಾಗಿಲು ತೆರೆದಾಗ ತನ್ನ ಸಮತೋಲನ ಕಳೆದುಕೊಂಡು ರಸ್ತೆಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ಲಕ್ನೋದ ಚಿನ್ಹಾಟ್ ಪ್ರದೇಶದ ನಿವಾಸಿ ರಾಮ್ ಜಿವಾನ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ಸಾವಿತ್ರಿ ಕೂಡ ಅವರೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಹೆಚ್ಚಿನ ತನಿಖೆಗಾಗಿ ಬಸ್ ಅನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.