Dr Broo: ನೈಜೀರಿಯಾದಲ್ಲಿ ಡಾಕ್ಟರ್ ಬ್ರೋಗೆ ಸ್ಥಳೀಯ ವ್ಯಕ್ತಿಯಿಂದ ಥಳಿತ – ರೊಚ್ಚಿಗೆದ್ದು ತಾನೂ ಹಿಗ್ಗಾಮುಗ್ಗ ಗುಮ್ಮಿದ ಡಾ. ಬ್ರೋ!! ವಿಡಿಯೋ ವೈರಲ್ !!
Dr Bro: ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಎಂದರೆ ಕನ್ನಡಿಗರಿಗೆಲ್ಲ ಅದೇನೋ ಅಚ್ಚುಮೆಚ್ಚು. ನಮಸ್ಕಾರ ದೇವರು ಎನ್ನುತ್ತಾ ಇಡೀ ವಿಶ್ವವನ್ನು ಕನ್ನಡಿಗರಿಗೆ ತೋರಿಸಿದ ಹೆಮ್ಮೆಯ ಯುವಕ ಈತ. ಈತನ ಮಾತು ಕೇಳುತ್ತ ಆತ ಮಾಡುವ ವಿಡಿಯೋ ನೋಡುವುದೇ ಕನ್ನಡಿಗರಿಗೆ ಒಂದು ಖುಷಿ. ಡಾಕ್ಟರ್ ಬ್ರೋ(Dr Bro) ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದು ಲಕ್ಷಗಟ್ಟಲೆ ವೀವ್ಸ್ ಪಡೆಯುತ್ತದೆ.
ಅಂದಹಾಗೆ ಇದೀಗ ಡಾಕ್ಟರ್ ಬ್ರೋ ಅವರು ನೈಜೀರಿಯಾದಲ್ಲಿ(Nigeria) ಪ್ರವಾಸವನ್ನು ಕೈಗೊಂಡಿದ್ದಾರೆ. ಅಲ್ಲಿನ ಹಲವು ವಿಶೇಷಗಳನ್ನು ಜನರಿಗೆ ತೋರಿಸುತ್ತಾ ಮನರಂಜಿಸುತ್ತಿದ್ದಾರೆ. ಆದರೆ ಈಗ ಡಾಕ್ಟರ್ ಬ್ರೋ ಫೈಟಿಂಗ್ ಒಂದರಲ್ಲಿ ಸಿಕ್ಕಿ ಬಿದ್ದಿದ್ದಾರೆ. ಹೌದು, ನೈಜೀರಿಯಾದ ಬ್ಲಾಗ್ ನಲ್ಲಿ ಡಾ. ಬ್ರೋ ಅಲ್ಲಿ ಸ್ಥಳೀಯವಾಗಿ ನಡೆಯುವ ಕುಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸಿದ್ದಾರೆ ಅಂದರೆ ವೀಕ್ಷಕರಾಗಿ ಅಲ್ಲ, ಸ್ವತಹ ಸ್ಪರ್ಧಿಯಾಗಿ ಅದರಲ್ಲಿ ಅಖಾಡಕ್ಕಿಳಿದಿದ್ದಾರೆ.
View this post on Instagram
ಹೌದು, ಈ ಕುರಿತು ಡಾಕ್ಟರ್ ಬ್ರೋ ಅವರೇ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ನೈಜೀರಿಯಾದ ಸಿಟಿಯೊಂದರಲ್ಲಿ ಫೈಟಿಂಗ್ ಆಯೋಜಿಸಲಾಗಿದೆ. ಆ ಫೈಟಿಂಗ್ ನಲ್ಲಿ ನಾನು ಕೂಡ ಸ್ಪರ್ಧಿಯಾಗಿ ಪಾರ್ಟಿಸಿಪೇಟ್ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಅಲ್ಲದೆ ಅಲ್ಲಿನ ನಿಯಮದಂತೆ ಕೈಗೆ ದಾರವನ್ನು ಸುತ್ತಿಕೊಂಡು ಅಲ್ಲಿನ ಮುಖಂಡರೊಬ್ಬರ ಆಶೀರ್ವಾದ ಪಡೆದು ಫೈಟಿಂಗ್ ಅಖಾಡಕ್ಕೆ ಹೇಳುತ್ತಾರೆ. ಆರಂಭದಲ್ಲಿ ಡಾಕ್ಟರ್ ಬ್ರೋ ಅವರ ಎದುರಾಳಿ ಡಾಕ್ಟರ್ ಬ್ರೋಗೆ ಹಿಗ್ಗಾಮುಗ್ಗ ಥಳಿಸುತ್ತಾರೆ. ಈ ವೇಳೆ ಸುಸ್ತಾದ ಡಾಕ್ಟರ್ ಬ್ರೋಗೆ ಅಲ್ಲಿನ ಸ್ಥಳೀಯರು ಒಬ್ಬರು ಹೇಗೆ ಫೈಟಿಂಗ್ ಮಾಡಬೇಕೆಂಬುದನ್ನು ತರಬೇತಿ ನೀಡುತ್ತಾರೆ.
ಅನಂತರ ಕಂಪ್ಲೀಟ್ ತಯಾರಾದ ಡಾಕ್ಟರ್ ಬ್ರೋ ಹುಮ್ಮಸ್ಸಿನಿಂದ ಅಖಾಡಕ್ಕೆ ಮತ್ತೆ ಇಳಿಯುತ್ತಾರೆ. ಇವಳೇ ಪೂರ್ತಿ ಹುರುಪನ್ನು ಪಡೆದ ಡಾಕ್ಟರ್ ಬ್ರೋ ತಮ್ಮ ಎದುರಾಳಿಗೆ ಹಿಗ್ಗಾಮುಗ್ಗ ಥಳಿಸುತ್ತಾರೆ. ಡಾಕ್ಟರ್ ಬ್ರೋ ರೊಚ್ಚಿಗೆದ್ದಿರುವುದನ್ನು ಕಂಡ ಎದುರಾಳಿ ಒಮ್ಮೆ ಅವಕ್ಕಾಗಿ ನಿಂತುಕೊಳ್ಳುತ್ತಾನೆ. ಆದರೂ ಕೂಡ ತಮ್ಮ ಪೌರುಷವನ್ನು ಡಾಕ್ಟರ್ ಬ್ರೋ ಮೆರೆಯುತ್ತಾರೆ. ಕೊನೆಗೆ ಈ ಸ್ಪರ್ಧೆಯಲ್ಲಿ ಜಯಶಾಲಿಯಾಗಿ ಹೊರಹೊಮ್ಮುತ್ತಾರೆ. ಈ ಒಂದು ಹೆಮ್ಮೆಯ ವಿಡಿಯೋವನ್ನು ಡಾ. ಬ್ರೋ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ.