Milk price hike: ರಾಜ್ಯದ ಜನತೆಗೆ ಮತ್ತೆ ಶಾಕ್ – ನಂದಿನಿ ಹಾಲಿನ ದರ ಮತ್ತೆ 5 ರೂ.ಏರಿಕೆ?
Milk price Hike: ಅಡುಗೆ ಎಣ್ಣೆ, ಇಂಧನ, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು, ನಂದಿನಿ ಹಾಲಿನ ದರ (Milk price Hike) ಕೂಡ ಶೀಘ್ರವೇ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಸದ್ಯ ನಂದಿನಿ ಹಾಲಿನ ದರ ಏರಿಕೆ ಕುರಿತು ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಸುಳಿವು ನೀಡಿದ್ದು, ನಂದಿನಿ ಹಾಲಿನ ದರ 5 ರೂ. ಏರಿಸಿ, ಆ ಹಣವನ್ನು ರೈತರಿಗೆ ಕೊಡಲು ಚಿಂತನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಎಂದು ಹೇಳಲಾಗಿದೆ.