LPG: ಡಿಸೆಂಬರ್ ಮೊದಲ ದಿನವೇ ದೇಶದ ಜನತೆಗೆ ಭರ್ಜರಿ ಶಾಕ್ – LPG ಸಿಲಿಂಡರ್ ದರದಲ್ಲಿ ಭಾರಿ ಏರಿಕೆ
LPG: ದೇಶದ ಜನತೆಗೆ ಡಿಸೆಂಬರ್ ತಿಂಗಳ ಮೊದಲ ದಿನವೇ ಭರ್ಜರಿ ಶಾಕ್ ತಟ್ಟಿದೆ. ಅದೇನೆಂದರೆ ಗ್ಯಾಸ್ ಸಿಲಿಂಡರ್(LPG) ಬೆಲೆ ಇಂದಿನಿಂದ ಏರಿಕೆಯಾಗಿದೆ.
ಹೌದು, ಡಿಸೆಂಬರ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಆಘಾತ ಎದುರಾಗಿದೆ. ಇಂದು ಬೆಳ್ಳಂಬೆಳಗ್ಗೆ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ₹18.50 ಏರಿಕೆಯಾಗಿದೆ. ಆದರೆ 14 ಕೆಜಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಅಂದಹಾಗೆ ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದಲೇ ಭರ್ಜರಿ ಏರಿಕೆಯಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ಬೆಲೆ ಏರಿಕೆ ಮಾಡಲು ನಿರ್ಧರಿಸಿರುವುದರಿಂದ ಜನರ ಜೇಬಿಗೆ ಕತ್ತರಿ ಬೀಳಲಿದೆ. ಎಲ್ಲೆಲ್ಲಿ ಯಾವ ಗ್ಯಾಸ್ ಬೆಲೆ ಏರಿಕೆಯಾಗಿದೆ ಅನ್ನೋದರ ವಿವರ ಇಲ್ಲಿದೆ.
* ಕೋಲ್ಕತ್ತಾದಲ್ಲಿ:** ₹1927
* ಮುಂಬೈನಲ್ಲಿ:** ₹1771
* ಚೆನ್ನೈನಲ್ಲಿ:** ₹1964.50
* ಬೆಂಗಳೂರು:** ₹1897.50
ಇನ್ನು ಈ ಬಾರಿ ಸಿಲಿಂಡರ್ ಬೆಲೆ ಗಣನೀಯವಾಗಿ ಇಳಿಕೆಯಾಗಬಹುದು ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ ಕಳೆದ 4 ತಿಂಗಳಿನಂತೆ ಈ ಬಾರಿಯೂ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಉಂಟಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.