Bihar: ಹೆಂಡತಿಯನ್ನು ಹನಿಮೂನ್​​ಗೆಂದು ಕರೆದ್ಯೊಯ್ದು, ಶೇಖ್​​​​ಗೆ ಮಾರಿದ ಪಾಪಿ ಪತಿ – ಆದ್ರೂ ಪ್ಲಾನ್ ಮಾಡಿ ಮತ್ತೆ ಭಾರತಕ್ಕೆ ಬಂದ ಪತ್ನಿ, ಆಕೆ ಭಾರತಕ್ಕೆ ವಾಪಸ್ಸಾದದ್ದೇ ರೋಚಕ

Share the Article

Bihar: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತಾರ್‌ಗೆ ಹನಿಮೂನ್‌ಗೆಂದು ಕರೆದುಕೊಂಡು ಹೋಗಿದ್ದು, ಬಳಿಕ ಅಲ್ಲಿನ ಶೇಖ್‌ಗೆ 10 ಲಕ್ಷ ರೂಪಾಯಿಗೆ ಆಕೆಯನ್ನು ಮಾರಾಟ ಮಾಡಿರುವಂತ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ ಪುಣ್ಯಕ್ಕೆ ಆಕೆ ಭಾರತಕ್ಕೆ ಮರಳಿದ್ದಾಳೆ. ಆಕೆ ಭಾರತಕ್ಕೆ ಬಂದಿರುವುದೇ ಒಂದು ರೋಚಕ ಕಥೆ ಆಗಿದೆ.

ಹೌದು, ಬಿಹಾರದ(Bihar) ಪಾಟ್ನಾದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತಾರ್‌ಗೆ ಹನಿಮೂನ್‌ಗೆಂದು ಕರೆದುಕೊಂಡು ಹೋಗಿ ಅಲ್ಲಿನ ಶೇಖ್‌ಗೆ 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಪತ್ನಿಯನ್ನು ಮಾರಾಟ ಮಾಡಿದ ನಂತರ ಭಾರತಕ್ಕೆ ಬಂದ ಪತಿ ಅಂಚೆ ಮೂಲಕ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಭದ್ರತಾ ಸಿಬ್ಬಂದಿಯ ಸಹಾಯದಿಂದ ಮಹಿಳೆ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಭಾರತಕ್ಕೆ ಮರಳಿದ್ದು, ಇದೀಗ ಪತಿ ಮತ್ತು ಅತ್ತೆಯ ವಿರುದ್ಧ ದಿಘಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಏನಿದು ಘಟನೆ?
2021 ರಲ್ಲಿ ಆರೋಪಿ ಶಹಬಾಜ್ ಹಸನ್​ನೊಂದಿಗೆ ಈ ಮಹಿಳೆಗೆ ವಿವಾಹವಾಗಿತ್ತು. ಮನೆಯವರಿಗೆ ಯುವಕ ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ನೌಕರ ಎಂದು ತಿಳಿಸಿದ್ದರು. ಆದರೆ, ಮದುವೆ ಬಳಿಕ ಗಂಡನ ಮನೆಗೆ ಹೋದಾಗ ಪತಿ ಎನ್ ಜಿಒದಲ್ಲಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 2021 ರ, ಅಕ್ಟೋಬರ್ 29 ರಂದು, ಅವನು ತನ್ನ ಹೆಂಡತಿಯನ್ನು ಮನವೊಲಿಸಿ ಕತಾರ್‌ಗೆ ಕರೆದುಕೊಂಡು ಹೋಗಿದ್ದಾನೆ.

ನಂತರ ಪತಿ ಆಕೆಯನ್ನು ಕತಾರ್ ನ ಶೇಖ್ ಎಂಬುವವರಿಗೆ 10 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ. ಅಲ್ಲದೆ ಪತ್ನಿಯನ್ನು ಮಾರಾಟ ಮಾಡಿ ಪಾಟ್ನಾಗೆ ತಲುಪಿದ್ದ ಈತ ಪತ್ನಿಗೆ ಅಂಚೆ ಮೂಲಕ ತ್ರಿವಳಿ ತಲಾಖ್ ಕಳುಹಿಸಿದ್ದಾನೆ. ವಾಸ್ತವ ವಿಚಾರ ಬೆಳಕಿಗೆ ಬಂದ ಪತ್ನಿ ಬುದ್ದಿವಂತಿಕೆ ತೋರಿ ಭದ್ರತಾ ಸಿಬ್ಬಂದಿಯ ಸಹಾಯದಿಂದ ಮಹಿಳೆ ತನಗಾದ ಕಹಿ ಅನುಭವವನ್ನು ಪತ್ರದಲ್ಲಿ ಬರೆದು ಭಾರತೀಯ ರಾಯಭಾರ ಕಚೇರಿಗೆ ತಲುಪಿಸಿದ್ದಾಳೆ. ನಂತರ ರಾಯಭಾರ ಕಚೇರಿಯ ಸಿಬ್ಬಂದಿಗಳು ಮಹಿಳೆಯನ್ನು ಭಾರತಕ್ಕೆ ಸುರಕ್ಷಿತವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಪೂರ್ಣ ವಿಷಯಕ್ಕೆ ಸಂಬಂಧಿಸಿದಂತೆ, ಮಹಿಳೆ ಇದೀಗ ರಾಜಧಾನಿಯ ದಿಘಾ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಇಲ್ಲಿ ಒನ್ ಸ್ಟಾಪ್ ಸೆಂಟರ್ ಮೂಲಕ ಮಹಿಳೆಗೆ ಕಾನೂನು ನೆರವು ನೀಡಲಾಗುತ್ತಿದೆ.

Leave A Reply

Your email address will not be published.