Nigeria: 200 ಪ್ರಯಾಣಿಕರಿದ್ದ ಬೋಟ್ ಮುಳುಗಡೆ- 27 ಜನರು ಸಾವು, 100 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ!!

Nigeria: ಆಹಾರ ಮಾರುಕಟ್ಟೆಗೆ ಸಾಗಿಸುತ್ತ ನದಿಯಲ್ಲಿ ಸಾಗುತ್ತಿದ್ದ ದೋಣಿಯೊಂದು ಶುಕ್ರವಾರ (ನ.29) ಮುಳುಗಡೆಯಾಗಿದೆ. ಘಟನೆಯಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ.

 

ನೈಜಿರಿಯಾದ( Nigeria) ಕೋಗಿ ರಾಜ್ಯದಿಂದ ನೆರೆಯ ನೈಜರ್‌ಗೆ ಹೋಗುತ್ತಿದ್ದ ಬೋಟ್‌ನಲ್ಲಿ ಸುಮಾರು 200 ಪ್ರಯಾಣಿಕರಿದ್ದರು. ನದಿಯಲ್ಲಿ ದೋಣಿ ಚಲಿಸುವಾಗ ಈ ಘಟನೆ ನಡೆದಿದೆ. ಸ್ಥಳೀಯ ಡೈವರ್‌ ಗಳು ಶುಕ್ರವಾರ ಸಂಜೆಯ ವೇಳೆಗೆ 27 ಶವಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಇನ್ನೂ ಹುಡುಕು ಕಾರ್ಯಾಚರಣೆ ನಡೆಯುತ್ತಿದೆ.

ಘಟನೆ ಸಂಭವಿಸಿ ಸುಮಾರು 12 ಗಂಟೆಗಳ ನಂತರವೂ ಯಾರೂ ಬದುಕುಳಿದವರು ಪತ್ತೆಯಾಗಲಿಲ್ಲ ಎಂದು ವರದಿಯಾಗಿದೆ ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಇಬ್ರಾಹಿಂ ಔಡು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಮುಳುಗಡೆಗೆ ಕಾರಣವೇನು ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ.

Leave A Reply

Your email address will not be published.