Ananth Nag: ‘ಶಂಕರ್ ನಾಗ್ ಸಾವು ಅಪಘಾತವಲ್ಲ, ಪೂರ್ವ ನಿರ್ಧಾರಿತ’ – ತಮ್ಮನ ಸಾವಿನ ಬಗ್ಗೆ ಸ್ಪೋಟಕ ಸತ್ಯ ಬಿಚ್ಚಿಟ್ಟ ಅನಂತ್ ನಾಗ್

Ananth Nag: ಶಂಕರ್ ನಾಗ್. ಈ ಹೆಸರಲ್ಲೇ ಒಂದು ಪಾಸಿಟಿವ್ ಎನರ್ಜಿ ಇದೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ. ನಮ್ಮನ್ನಗಲಿದ್ದರೂ ಅವರ ನೆನಪು ಅಭಿಮಾನಿಗಳೆದೆಯಲ್ಲಿ ಸದಾ ಜೀವಂತ. ಬಣ್ಣ ಹಚ್ಚಿದ್ದ ಮತ್ತು ನಿರ್ದೇಶಿಸಿದ್ದ ಸಿನಿಮಾಗಳು, ಕರಾಟೆ ಕಿಂಗ್​​ಗೆ ಇದ್ದ ದೂರದೃಷ್ಠಿ, ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಬೆಳಸುವ ಅವರ ಕನಸು ಸದಾ ಅಭಿಮಾನಿಗಳನ್ನು ಕಾಡುತ್ತದೆ. ಒಂದು ವೇಳೆ ಶಂಕರ್ ನಾಗ್ ಬದುಕಿದ್ದರೆ ಇಂದು ಅವರಿಗೆ 70 ವರ್ಷಗಳು ತುಂಬುತ್ತಿದ್ದವು. ಏನೇ ಇರಲಿ ವಿಧಿ ಅವರನ್ನು ತೀರಾ ಚಿಕ್ಕ ವಯಸ್ಸಿಗೆ ಅಸುನಿಗುವಂತೆ ಮಾಡಿತು.

 

ಶಕರ್ ನಾಗ್(Shankar Nag) ಸಾವಿನ ಹಿಂದೆ ಹಲವಾರು ಅನುಮಾನಗಳಿವೆ. ಅವರ ಸಾವು ಸಹಜವಲ್ಲ, ಅಸಹಜವಾದುದು, ಕನ್ನಡ ಚಲನಚಿತ್ರದ ಹಿರಿಯ ನಟರು ಒಬ್ಬರಿಂದ ಅವರ ಸಾವಾಯಿತು, ಇದು ಪೂರ್ವ ನಿರ್ಧಾರಿತ ಸಾವು ಇಂದಲ್ಲ ಹಲವರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದು ಯಾವುದಕ್ಕೂ ಇಂದಿಗೂ ಉತ್ತರ ಸಿಕ್ಕಿಲ್ಲ. ಆದರೆ ಈಗ ಅಚ್ಚರಿ ಎಂಬಂತೆ ಶಂಕರ್ ನಾಗ್ ಅವರ ಅಣ್ಣ ಕನ್ನಡದ ಹಿರಿಯ ನಟ ಅನಂತನಾಗ್ ಅವರು ತಮ್ಮ ತಮ್ಮನ ಸಾವಿನ ಕುರಿತು ಮಾತನಾಡಿದ್ದಾರೆ.

ಯಸ್, ಹಿರಿಯ ನಟ ಅನಂತ್‌ ನಾಗ್ (Anant Nag) ಅವರು ಸಂದರ್ಶನವೊಂದರಲ್ಲಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಅವರ ತಮ್ಮ, ಕನ್ನಡದ ಮೇರು ನಟ-ನಿರ್ದೇಶಕ ಶಂಕರ್‌ ನಾಗ್ (Shankar Nag) ಬಗ್ಗೆ ಮಾತನ್ನಾಡಿದ್ದಾರೆ. ಶಂಕರ್‌ ನಾಗ್ ಸಾವು ಪೂರ್ವ ನಿರ್ಧಾರಿತ. ಅದು ಯಾರಿಂದ ಹೇಗೇ ಸಂಭವಿಸಿರಲಿ, ಅದು ಮೊದಲೇ ನಿರ್ಧಾರ ಆಗಿ ಹೋಗಿತ್ತು. ಏಕೆಂದರೆ, ಅದನ್ನು ಸರಿಯಾಗಿ 2 ವರ್ಷ ಮೊದಲೇ ಮಾತಾಜಿಯವರು ಮುನ್ಸೂಚನೆ ನೀಡಿದ್ದರು’ ಎಂದಿದ್ದಾರೆ.

‘ನಾನು ಆನಂದಾಶ್ರಮದ ಕುರಿತು ಹೇಳಿದ್ದೆ. ಕಾಸರಗೋಡು ಜಿಲ್ಲೆ.. ಮಾತಾಜಿ ಕೃಷ್ಣಾಬಾಯಿ ಅಂತ ಅವ್ರು. ನಮ್ ತಾಯಿಯವ್ರು ಅವರ ಆಶ್ರಯದಲ್ಲೇ ಬೆಳೆದಿದ್ದು.. ನಮ್ಮ ತಂದೆ ತೀರಿಕೊಂಡ ಮೇಲೆ ಕೂಡ ನಮ್ಮ ತಾಯಿ ಅಲ್ಲೇ ಆನಂದಾಶ್ರಮಕ್ಕೆ ಹೋಗಿ ಮಾತಾಜಿ ಅವ್ರ ಜೊತೆನಲ್ಲೇ ಇದ್ರು.. ಒಂದು ದಿನ ಮಾತಾಜಿಯವ್ರು ನನ್ ಕರೆದು ‘ಅನಂತ್‌ಜೀ ಇಲ್ಲಿ ಬಾ..’ ಅಂದ್ರು. ನಾನು ‘ಏನು ಮಾತಾಜಿ..’ ಅಂದಿದ್ದಕ್ಕೆ, ‘ಇನ್ನು ರಾಮ ನಾಮ ಹೆಚ್ಚು ಮಾಡು.. ಪ್ರಸಾದ ಹಂಚೋಕೆ ಸಿದ್ಧತೆ ಮಾಡ್ಕೋ ಅಂದ್ರು. ನಾನು ‘ಏನು ಮಾತಾಜಿ.. ಯಾರು, ಯಾರು.. ಏನು..’ ಎಂದಿದ್ದಕ್ಕೆ ‘ಯಾರು, ಏನು ಅಂತೆಲ್ಲ.. ಈಗ ಹೇಳಿದ್ದೇ ಹೆಚ್ಚಾಯ್ತು.. ಯಾವಾಗ ಅಂದ್ರೆ, ಇವತ್ತು 1988ರ ವಿಜಯದಶಮಿ. ಮುಂದಿನ ವರ್ಷ ಅಲ್ಲ, ಅದಕ್ಕೂ ಮುಂದಿನ ವರ್ಷ 1990ರ ವಿಜಯದಶಮಿ ದಿವಸ.. ಅದಕ್ಕೇ ನೀನು ಪ್ರಸಾದ ಹಂಚೋಕೆ ನೀನು ಸಿದ್ಧತೆ ಮಾಡ್ಕೋ..’ ಅಂದ್ರು. ನಾನು ‘ಅದೇ ಯಾರು, ಏನು..’ ಅಂತಂದ್ರೆ, ಅದಕ್ಕೇನೂ ಹೇಳ್ಲಿಲ್ಲ..

ಅವ್ರು ಹೀಗೆ ಮುನ್ಸೂಚನೆ ಕೊಟ್ಟಿದ್ದು 1988ರಲ್ಲಿ. ಅದರ ಮರು ವರ್ಷ, ಅಂದ್ರೆ 1989ರಲ್ಲಿ ಮಾತಾಜಿಯವರೇ ಹೊರಟುಹೋಗ್ಬಿಟ್ರು.. ಆ ವರ್ಷ, ಅಂದ್ರೆ 1989ರ ವಿಜಯದಶಮಿ ಸಮೀಪ ನಮ್ಮಅಮ್ಮ ನಮಗೆ ಕಾಲ್ ಮಾಡಿ, ನೀವಿಬ್ರೂ ಬನ್ನಿ ಇಲ್ಲಿಗೆ ಅಂತ ಹೇಳಿದ್ರು ಕಾಲ್ ಮಾಡಿ, ನಾನು ಹಾಗು ಶಂಕರ ಇಬ್ರೂ ಹೋಗಿದ್ವಿ.. ಅಗ ನಮ್ಗೆ ನಮ್ಮಮ್ಮ ಈ ಸಂಗ್ತಿ ಏನೂ ಹೇಳಿಲ್ಲ.. ಆದ್ರೆ, 1990ರ ವಿಜಯದಶಮಿ ದಿನ ಶಂಕರ್‌ ಅಪಘಾತದಲ್ಲಿ ತೀರಿ ಹೋಗ್ಬಿಟ್ಟ. ಆವತ್ತು ಅಮ್ಮಂಗೆ ಕಾಲ್ ಮಾಡಿ ಹೇಳಿದಾಗ, ಅಮ್ಮ ‘ಹೌದು ಕಣೋ, ಮಾತಾಜಿಯವ್ರು ಎರಡು ವರ್ಷ ಮುಂಚೆನೇ ಹೇಳಿದ್ದರು. ನಾನೇ ಮರೆತುಹೋಗ್ಬಿಟ್ಟಿದ್ದೆ..’ ಅಂದ್ರು. ಅಲ್ಲಿಗೆ ಶಂಕರನ ಕಥೆ ಎಲ್ಲಾ ಮುಗಿದುಹೋಗಿತ್ತು..’ ಎಂದಿದ್ದಾರೆ ಶಂಕರ್‌ನಾಗ್ ಅಣ್ಣ ಅನಂತ್‌ ನಾಗ್.

Leave A Reply

Your email address will not be published.