Belthangady : ಪುಂಜಾಲಕಟ್ಟೆ ಯುವಕ ನೇಣು ಬಿಗಿದು ಆತ್ಮಹತ್ಯೆ !!

Belthangady : ಪುಂಜಾಲಕಟ್ಟೆ ಬಳಿಯ ರಾಯಿ ಗ್ರಾಮದ ಮಾಬೆಟ್ಟು ನಿವಾಸಿ ವಿಶ್ವನಾಥ ಶೆಟ್ಟಿ ಅವರ ಪುತ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಹೌದು, ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಬೆಳ್ತಂಗಡಿ(Belthangady ) ತಾಲ್ಲೂಕಿನ ಪುಂಜಾಲಕಟ್ಟೆ(Punjalakatte) ಬಳಿಯ ರಾಯಿ ಗ್ರಾಮದ ಮಾಬೆಟ್ಟು ಸುದರ್ಶನ್‌ ಶೆಟ್ಟಿ (26) ಅವರು ನ.26ರಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಿತ್ತಜನಕಾಂಗ ವೈಫ‌ಲ್ಯದಿಂದ ಬಳಲುತ್ತಿದ್ದ ಸುದರ್ಶನ್‌ ಶೆಟ್ಟಿ ಅವರು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದರಿಂದ ಮನ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.