Death: ಹುರಿದ ಕಡಲೆಕಾಳು ತಿಂದು ಒಂದೇ ಕುಟುಂಬದ ಮೂವರು ಸಾವು!
Death: ಸಾವು ಯಾವ ರೂಪದಲ್ಲಿ ಬರುತ್ತೆ ಅನ್ನೋದು ಊಹಿಸೋಕೆ ಕೂಡಾ ಸಾಧ್ಯವಿಲ್ಲ ಎಂಬದಕ್ಕೆ ಇದೇ ಉದಾಹರಣೆ. ಹೌದು, ಕೇವಲ ಹುರಿದ ಕಡಲೆಕಾಳು ತಿಂದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು (Death) , ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಮಾಹಿತಿ ವರದಿ ಆಗಿದೆ.
ಬುಲಂದ್‌ಶಹರ್‌ನ ನರಸೇನಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್‌ಪುರ ಬರ್ವಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನವೆಂಬರ್ 24 ರ ಸಂಜೆ ಸಂತ್ರಸ್ತರ ಕುಟುಂಬವು ಮಾರುಕಟ್ಟೆಯಲ್ಲಿ ಬೀದಿ ಬದಿ ತಳ್ಳುವ ಗಾಡಿಯಲ್ಲಿ ಹುರಿದ ಕಡಲೆಕಾಳು ಖರೀದಿಸಿ ತಿಂದಿದ್ದರು. ಹಾಗೂ ಮನೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಿದ್ದರು ಎಂದು ಹೇಳಲಾಗುತ್ತಿದೆ. ಇದಾದ ನಂತರ 50 ವರ್ಷದ ಅಜ್ಜ ಕಲುವಾ ಸಿಂಗ್ ಮತ್ತು 8 ವರ್ಷದ ಅಮಾಯಕ ಮೊಮ್ಮಗ ಲವಿಶ್ ಸಾವನ್ನಪ್ಪಿದ್ದಾರೆ. ನಿನ್ನೆ ಸೊಸೆ ಜೋಗೇಂದ್ರಿ ಕೂಡ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಸಾವಿಗೆ ಕಾರಣ ಪತ್ತೆ ಹಚ್ಚುವಲ್ಲಿ ಆಡಳಿತಾಧಿಕಾರಿಗಳು ನಿರತರಾಗಿದ್ದಾರೆ. ಇನ್ನು ಮೃತರ ಸಂಬಂಧಿಕರು ಮರಣೋತ್ತರ ಪರೀಕ್ಷೆ ನಡೆಸದೆ ಶವವನ್ನು ಸುಟ್ಟು ಹಾಕಿದ್ದಾರೆ. ಇದೀಗ ಸೊಸೆ ಜೋಗೇಂದ್ರಿ ಕೂಡ ಸಾವನ್ನಪ್ಪಿದ್ದು, ಈಕೆಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಲಿದೆ.
ಆದರೆ, ಇಡೀ ಪ್ರಕರಣದಲ್ಲಿ ಬೇಳೆ ಮತ್ತು ಇತರ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು, ಅವ್ಯವಹಾರ ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಅಧಿಕಾರಿ ವಿನೀತ್ ಕುಮಾರ್ ತಿಳಿಸಿದ್ದಾರೆ.