Kantara: ‘ಕಾಂತಾರ’ ಶೂಟಿಂಗ್ ಗೆ ಸಾಲು ಸಾಲು ವಿಘ್ನ – ಚಿತ್ರತಂಡಕ್ಕೆ ಎದುರಯ್ತಾ ಉಡುಪಿಯ ಈ ದೈವದ ಸಂಕಷ್ಟ?

Kantara: ಕಾಂತಾರ ಸಿನಿಮಾ ನಿರೀಕ್ಷೆ ಮೀರಿ ಯಶಸ್ಸು ಕಂಡಂತಹ ಕನ್ನಡದ ಚೊಚ್ಚಲ ಚಲನಚಿತ್ರ. ರಾಜ್ಯದ ಮಾತ್ರವಲ್ಲ ದೇಶದ ಮಾತ್ರವಲ್ಲ ಇಡೀ ವಿಶ್ವದ ಜನರ ಗಮನಸೆಳೆದಂತಹ ಚಿತ್ರ ಇದು. ಇದೀಗ ಕಾಂತಾರ ಫ್ರೀಕ್ವೆಲ್ ಚಿತ್ರ ಶೂಟಿಂಗ್ ಆಗುತ್ತಿದೆ. ಜನರ ಕುತೂಹಲ ಹೆಚ್ಚಿಸಿದೆ. ಆದರೆ ಈ ನಡುವೆ ಕಾಂತಾರ ಚಿತ್ರತಂಡಕ್ಕೆ ದೈವದ ಸಂಕಷ್ಟ ಎದುರಾಗಿದೆಯೇ ಎಂಬ ಪ್ರಶ್ನೆ ಒಂದು ಕಾಡುತ್ತಿದೆ.

 

ಹೌದು, ಕಾಂತಾರ(Kantara) ಪ್ರೀಕ್ವೆಲ್​ಗೆ ದೈವದ ಸಂಕಷ್ಟ ಶುರುವಾಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಯಾಕೆಂದರೆ ಇತ್ತೀಚಿಗಷ್ಟೇ ಮುದುರಿನಲ್ಲಿ ಶೂಟಿಂಗ್ ಮುಗಿಸಿ ಕೊಲ್ಲೂರಿಗೆ ಹಿಂದಿರುಗುತ್ತಿದ್ದಾಗ, ಜೂನಿಯರ್ ಆರ್ಟಿಸ್ಟ್‌ಗಳನ್ನು ಕೊಂಡೊಯ್ಯುತ್ತಿದ್ದ ಮಿನಿ ಬಸ್ ಜಡ್ಕಲ್ ಬಳಿ ಅಪಘಾತಕ್ಕೀಡಾಗಿತ್ತು. ಈ ಅಪಘಾತಕ್ಕೆ ಕಾರಣ ಏನು ಅನ್ನೋ ಸ್ಥಳೀಯ ಜನರಲ್ಲಿ ಭಾರೀ ಚರ್ಚೆಯಾಗ್ತಿದೆ. ಸಿನಿಮಾ ಕೆಲಸಗಳು ಭರದಿಂದ ಸಾಗ್ತಿರೋ ಸಮಯದಲ್ಲೇ ಸಾಲು ಸಾಲು ವಿಘ್ನಗಳು ಕೂಡ ಎದುರಾಗ್ತಿದೆ.

ಜಡ್ಕಲ್ ಮಾಸ್ತಿಯಮ್ಮನ(Jadkal Mastamma)ಗುಡಿ ಅಂದ್ರೆ ಉಡುಪಿ ಸುತ್ತಮುತ್ತ ತುಂಬಾನೇ ಫೇಮಸ್​ ಆಗಿದೆ. ಇಲ್ಲಿ ನುಡಿದ ಕಾರ್ಣಿಕ ಸುಳ್ಳಾಗಿದ್ದೇ ಇಲ್ಲ ಅಂತಾ ಜನ ನಂಬ್ತಾರೆ. ಮಾಸ್ತಿಯಮ್ಮ ಅಂದ್ರೆ ಊರು ಕಾಯೋ ದೇವಿ. ಹೀಗಾಗಿಯೇ ಕೊಲ್ಲೂರಿಗೆ ಹೋಗೋರು ಈ ತಾಯಿ ಮುಂದೆ ಗಾಡಿ ನಿಲ್ಲಿಸಿ ಪ್ರಾರ್ಥನೆ ಸಲ್ಲಿಸಿ ಮುಂದೆ ಹೋಗ್ತಾರೆ. ಯಾರೇ ಈ ರಸ್ತೆಯಲ್ಲಿ ಹೋದ್ರೂ ದೇವರಿಗೆ ಕೈ ಮುಗಿದು ಮುಂದೆ ಸಾಗ್ತಾರೆ. ಆದ್ರೆ, ಕಾಂತಾರ ಟೀಮ್​ ದೇವಿಗೆ ನಮಸ್ಕಾರ ಹಾಕಿಲ್ಲ. ಈ ಊರ ದೇವಿಯನ್ನು ನೆನೆಯಲಿಲ್ಲ. ಇದೇ ಕಾರಣಕ್ಕೆ ಈ ಅಪಘಾತವೂ ನಡೆದಿದೆ ಅಂತ ಇಲ್ಲಿನ ಸ್ಥಳೀಯರು ಮಾತಾಡ್ತಿದ್ದಾರೆ.

Leave A Reply

Your email address will not be published.