Pramod Muthalik: ಬಾಂಗ್ಲಾ ಹುಟ್ಟಿದ್ದೇ ಭಾರತದಿಂದ; ಹೇಗೆ ಹುಟ್ಟು ಹಾಕಿದ್ದೇವೆ ಹಾಗೇ ಸಾಯಿಸಲು ಗೊತ್ತು: ಮುತಾಲಿಕ್

Pramod Muthalik: ಬಾಂಗ್ಲಾ ಹುಟ್ಟಿದ್ದೇ ಭಾರತದಿಂದ, ಹೇಗೆ ಹುಟ್ಟು ಹಾಕಿದ್ದೇವೆ ಹಾಗೇ ಸಾಯಿಸಲು ಗೊತ್ತು ಎಂದು ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಒಟ್ಟಿನಲ್ಲಿ ಬಾಂಗ್ಲಾದೇಶ (Bangladesh) ಹುಟ್ಟಿಗೆ ಭಾರತದ ಪಾಲು ಇದೆ ಎಂದು ಮುತಾಲಿಕ್ ಅವರ ಅಭಿಪ್ರಾಯ ಆಗಿದೆ.

 

ಈಗಾಗಲೇ ಹುಕ್ಕೇರಿ ಪಟ್ಟಣದಲ್ಲಿ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Brahmachari) ಅವರ ಬಂಧನ ಖಂಡಿಸಿ ಮಾತನಾಡಿದ ಮುತಾಲಿಕ್ ಅವರು , ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಸ್ವಾಮೀಜಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿದೆ? ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ‌ ಎಂದು ಕಿಡಿಕಾರಿದರು.

ಹಿಂದೂ ಸಮಾಜದ ಮೇಲಿನ‌ ಆಕ್ರಮಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಾಯಿಬಿಡಬೇಕು. ಇನ್ಮುಂದೆ ಖಂಡನೆ, ಮಂಡನೆ, ಎಚ್ಚರಿಕೆ ನೀಡಿದ್ದು ಸಾಕು ಮುಂದೆ ಕ್ರಮ ಕೈಗೊಳ್ಳಬೇಕು. ಬಾಂಗ್ಲಾದೇಶಕ್ಕೆ ಸರಿಯಾದ ಬುದ್ದಿ ಕಲಿಸುವ ಪ್ರಕ್ರಿಯೆ ಆಗಬೇಕು‌ ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ ಸೊಕ್ಕಿನ ಮುಸ್ಲಿಂ ಕಿಡಿಗೇಡಿಗಳಿಂದ ನಮ್ಮ ದೇಶ ಸೇರಿದಂತೆ ಎಲ್ಲೆಡೆ ದೌರ್ಜನ್ಯ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಮಾಜ ನಿಮ್ಮ ಮೇಲೆ ಸಿಟ್ಟಾಗುತ್ತೆ. ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸ್ವಾಮೀಜಿ ಬಿಡುಗಡೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ.

Leave A Reply

Your email address will not be published.