Election: ಭಾರತದಲ್ಲಿ ಮುಸ್ಲಿಮರಿಗೆ ‘ಮತದಾನದ ಹಕ್ಕು’ ಇಲ್ಲದಂತೆ ಮಾಡಬೇಕು: ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ

Election: ವಕ್ಫ್ ವಿರುದ್ಧವಾಗಿ ಈಗಾಗಲೇ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ತಂಡ ಬೀದರ್ ನಿಂದ ಹೋರಾಟವನ್ನು ಆರಂಭಿಸಿದ್ದು, ಇದೇ ವಿಚಾರವಾಗಿ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿಯವರು ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ಖಡಕ್ ಹೇಳಿಕೆ ನೀಡಿದ್ದಾರೆ.

 

ಬೆಂಗಳೂರಿನಲ್ಲಿ ಮಾತನಾಡಿದ ಚಂದ್ರಶೇಖರನಾಥ ಸ್ವಾಮೀಜಿಯವರು , ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ಎಲ್ಲರೂ ಸೇರಿ ದೇಶದಲ್ಲಿ ವಕ್ಫ್ ಮಂಡಳಿ ಇಲ್ಲದಂತೆ ಮಾಡಬೇಕು. ರೈತರ ಪರವಾಗಿ ಜಮೀನು ಉಳಿಸಲು ಬೇಕಾದ ಹೋರಾಟವನ್ನು ನಾವು ಮಾಡೋಣ. ಸರ್ಕಾರ ಬಿದ್ದು ಹೋದರು ಪರವಾಗಿಲ್ಲ ನಾವೆಲ್ಲರೂ ಹೋರಾಡೋಣ. ಎಂದು ಬೆಂಗಳೂರಿನಲ್ಲಿ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ .

Leave A Reply

Your email address will not be published.