Karkala: ವಿಪರೀತ ಸಾಲ, ಮಾನಸಿಕವಾಗಿ ಕುಗ್ಗಿ ವ್ಯಕ್ತಿ ಆತ್ಮಹತ್ಯೆ !! ಪ್ರಕರಣ ದಾಖಲು

Share the Article

Karkala: ಆರ್ಥಿಕ ಮುಗ್ಗಟ್ಟಿನಿಂದ ವ್ಯಕ್ತಿಯೊಬ್ಬರು ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕಾರ್ಕಳದಲ್ಲಿ ನಡೆದಿದೆ.

ಹೌದು, ಮನೆ ಕಟ್ಟುವಾಗ ಮಾಡಿರುವ ವಿಪರೀತ ಸಾಲ ಮತ್ತು ಸರಿಯಾದ ಕೆಲಸ ಇಲ್ಲದೆ ಆರ್ಥಿಕ ಮುಗ್ಗಟ್ಟಿನಿಂದ ಮಾನಸಿಕವಾಗಿ ನೊಂದ ಕಾರ್ಕಳ(Karkala) ಕುಂಟಲ್ಪಾಡಿ ನಿವಾಸಿ ಹರೀಶ(35) ಎಂಬವರು ನ.24ರಂದು ಮಧ್ಯಾಹ್ನ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ಅವರು ನಾಲ್ಕು ತಿಂಗಳ ಹಿಂದಷ್ಟೇ ಮನೆಗೆ ಮರಳಿದ್ದರು. ನಾಲ್ಕು ವರ್ಷದ ಹಿಂದೆ ಮನೆಯನ್ನು ಮಾಡಿದ್ದ ಅವರು ವಿಪರೀತ ಸಾಲ ಮಾಡಿಕೊಂಡಿದ್ದರು. ಮನೆಯ ಸಾಲ ತೀರಿಸಲಾಗದೆ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಹರೀಶ್ ಅವರ ತಮ್ಮ ಅವರು ನೀಡಿದ ಮಾಹಿತಿ ಪ್ರಕಾರ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

Leave A Reply