BJP: ಇಂದಿನಿಂದ ವಕ್ಫ್‌ ವಿರುದ್ಧ ಬಿಜೆಪಿ ರೆಬಲ್ಸ್‌ ಟೀಂ ಹೋರಾಟ: ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವ

BJP: ಇಂದಿನಿಂದ ವಕ್ಫ್‌ ವಿರುದ್ಧ ಬಿಜೆಪಿ ರೆಬಲ್ಸ್‌ ಟೀಂ ಹೋರಾಟ ನಡೆಸಲಿದ್ದು, ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವ ವಹಿಸಲಿದ್ದಾರೆ. ಹೌದು, ಗಡಿ ಜಿಲ್ಲೆಯಲ್ಲಿ ಬಿಜೆಪಿ (BJP) ರೆಬಲ್ಸ್‌ ಟೀಂ ಇಂದಿನಿಂದ ವಕ್ಫ್‌ ವಿರುದ್ಧ ಹೋರಾಟ ಮಾಡಲಿದ್ದು, ʻವಕ್ಫ್ ಹಠಾವೋ ಭಾರತ್ ದೇಶ್ ಬಚಾವೋʼ ಘೋಷವಾಕ್ಯದಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಅಂಡ್‌ ಟೀಂ ಹೋರಾಟ ನಡೆಸಲಿದೆ.

ಇಂದು ಬೆಳಗ್ಗೆ 9 ಗಂಟೆ ವೇಳೆಗೆ ನಗರದ ಝರಣಿ ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಕ್ಫ್ ವಿರುದ್ಧ ಹೋರಾಟ ಶುರು ಮಾಡಲಿದೆ. ಈ ಹೋರಾಟ ಡಿಸೆಂಬರ್‌ 1ರ ವರೆಗೆ ಐದು ಜಿಲ್ಲೆಗಳಲ್ಲಿ ನಡೆಯಲಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್‌ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ್, ಹೊಳಲ್ಕೆರೆ ಚಂದ್ರಪ್ಪ ಸೇರಿ ಹಲವರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಬೀದರ್ ತಾಲೂಕಿನ ಧರ್ಮಾಪುರ, ಚಟ್ನಳ್ಳಿ ಗ್ರಾಮಗಳಿಗೆ ರೆಬಲ್ಸ್‌ ಟೀಂ ಭೇಟಿ ನೀಡಲಿದೆ. ಅಲ್ಲಿ ವಕ್ಫ್‌ನಿಂದ ತೊಂದರೆಗೆ ಒಳಗಾದ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲಿದೆ. ಕೆಲ ದಿನಗಳ ಹಿಂದೆಯಷ್ಟೇ 26 ಎಕ್ರೆಯ ಇಡೀ ಗ್ರಾಮವೇ ವಕ್ಫ್‌ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿತ್ತು, ಹಾಗಾಗಿ ಇಲ್ಲಿನ ಜನರೊಟ್ಟಿಗೆ ರೆಬಲ್ಸ್‌ ಟೀಂ ಸಮಾಲೋಚನೆ ನಡೆಸಲಿದೆ.

ಇನ್ನು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೀದರ್‌ನ ಗಣೇಶ ಮೈದಾನದಲ್ಲಿ ಸಭೆ ನಡೆಸಿ ರೈತರು, ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲಿದೆ. ಸಂಜೆ 4 ಗಂಟೆಗೆ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಿದೆ. ಸುಮಾರು 300 ರೈತ ಕುಟುಂಬಗಳ 960 ಎಕರೆ ಜಮೀನಿನಲ್ಲಿ ವಕ್ಫ್ ಹೆಸರು ಉಲ್ಲೇಖವಾಗಿದ್ದ ಚಟ್ನಳ್ಳಿ ಗ್ರಾಮಕ್ಕೆ ರೆಬಲ್ಸ್‌ ಟೀಂ ಭೇಟಿ ನೀಡಲಿದೆ.

Leave A Reply

Your email address will not be published.