Sumalatha Ambarish: 3 ಬಾರಿ ಸೋತ ನಿಖಿಲ್ ಕುಮಾರಸ್ವಾಮಿ, ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ ಸುಮಲತಾ ಅಂಬರೀಶ್!!

Share the Article

Sumalatha Ambarish: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿಪಿ ಯೋಗೀಶ್ವರ್ ಗೆದ್ದು ಬೀಗಿದ್ದಾರೆ. ನಿಖಿಲ್(Nikhil Kumarswamy ) ಮೂರನೇ ಬಾರಿಗೂ ಸೋಲು ಕಂಡಿದ್ದಾರೆ. ಇದೀಗ, ನಿಖಿಲ್ ಸೋಲಿನ ಬಗ್ಗೆ ಸುಮಲತಾ ಅಂಬರೀಶ್(Sumalatha Ambarish)ಪ್ರತಿಕ್ರಿಯೆ ನೀಡಿದ್ದಾರೆ.

ನಿಖಿಲ್ ಮೂರನೇ ಬಾರಿಗೆ ಸೋತ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಶ್, ಉಪಚುನಾವಣೆ ಅಂತ ಬಂದಾಗ ರೂಲಿಂಗ್ ಪಾರ್ಟಿ ಗೆಲ್ಲೋದು ಸರ್ವೇ ಸಾಮಾನ್ಯ. ಇದನ್ನು ನೋಡುತ್ತಾ ಕೂಡ ಬಂದಿದ್ದೇವೆ. ಯಾವುದೇ ಪಾರ್ಟಿ ಇರಲಿ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದಾನೇ ಹೋರಾಡುತ್ತಾರೆ. ನಿಖಿಲ್ ಸೋಲಿನ ಬಗ್ಗೆ ನಾನೇನು ರಿಯಾಕ್ಷನ್ ಕೊಡಲು ಇಷ್ಟಪಡುವುದಿಲ್ಲ. ನಿಖಿಲ್ ಇನ್ನೂ ಯುವಕ, ಒಳ್ಳೆಯ ಭವಿಷ್ಯವಿದೆ. ಒಳ್ಳೆಯದಾಗಲಿ ಎಂದು ಹಾರೈಸಿ ಸುಮ್ಮನಾಗಿದ್ದಾರೆ.

ಇನ್ನು ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಬಿಜೆಪಿಯ ಎರಡು ಕ್ಷೇತ್ರವನ್ನು ಈಗ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಈಗ ಕಾಂಗ್ರೆಸ್ ಇನ್ನಷ್ಟು ಸ್ಟ್ರಾಂಗ್ ಆಗಿದೆ.

Leave A Reply