Alchohal: ಚಳಿಗಾಲದಲ್ಲಿ ಬಿಯರ್‌ ಪ್ರಿಯರಿಗೆ ಸರ್ಕಾರದಿಂದ ಗುಡ್‌ನ್ಯೂಸ್‌!

Alchohal: ಚಳಿಗಾಲ ಶುರುವಾಗಿರುವ ಹೊತ್ತಲ್ಲೇ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. ಹೌದು, ಈ ಬಾರಿ ಚಳಿ ಹೆಚ್ಚಾಗಿರುವ ಕಾರಣ ಚಳಿಗಾಲ ಪೂರ್ಣಗೊಳ್ಳುವರೆಗೆ ನೆಮ್ಮದಿಯಾಗಿ ಎಣ್ಣೆ( Alchohal) ಕುಡಿಯಬಹುದು ಎಂಬ ಸಂದೇಶವನ್ನು ಸರಕಾರ ರವಾನಿಸಿದೆ. ಯಾಕೆಂದರೆ ಚಳಿಗಾಲ ಮುಗಿಯವವರೆಗೆ ಬಿಯರ್ ದರವನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿದೆ.

 

ಮೂಲಗಳ ಪ್ರಕಾರ ಪ್ರತಿವರ್ಷವೂ ಬಿಯರ್‌ ಮಾರಾಟದಲ್ಲಿ ಕುಸಿತ ಕಾಣುತ್ತಿದ್ದು, ಈ ಪರಿಸ್ಥಿತಿಯಲ್ಲಿ ಬಿಯರ್‌ ದರ ಏರಿಸಿದ್ರೆ ಹೆಚ್ಚೇನು ಆದಾಯ ಬರುವುದಿಲ್ಲ. ಹಾಗಾಗಿ ನಷ್ಟದ ಕಾರಣದಿಂದ ಬಿಯರ್‌ ದರ ಏರಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ. 

ಈಗಾಗಲೇ ಅಬಕಾರಿ ಇಲಾಖೆಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಟಾರ್ಗೆಟ್‌ ನೀಡಿದ್ದು, ಇದಕ್ಕಾಗಿ ಬಿಯರ್ ದರ ಹೆಚ್ಚಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಈ ಸಂಬಂಧ ಅಬಕಾರಿ ಇಲಾಖೆ ಪ್ರಸ್ತಾವನೆಯೂ ಸಲ್ಲಿಸಿತ್ತು. ಆದರೆ ಚಳಿಗಾಲ ಆಗಿರುವುದರಿಂದ ಬಿಯರ್ ದರ ಏರಿಕೆಯಾದರೆ ಇಲಾಖೆಯ ಆದಾಯ ಕುಸಿಯುತ್ತೆ ಅನ್ನುವ ಕಾರಣಕ್ಕೆ ಜನವರಿ ತಿಂಗಳವರೆಗೆ ಬಿಯರ್‌ ದರ ಏರಿಸದಿರಲು ಸರಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.

Leave A Reply

Your email address will not be published.