SSLC Exam: 2025 ಸಾಲಿನ SSLC ಪರೀಕ್ಷೆ ನೋಂದಣಿ: ಅವಧಿ ವಿಸ್ತರಣೆ

Share the Article

SSLC Exam: 2025 ನೇ ಸಾಲಿನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್ಸಿ (SSLC Exam) ಪರೀಕ್ಷೆ-1 ಕ್ಕೆ ಹೆಸರು ನೋಂದಾಯಿಸಿಕೊಳ್ಳಲು ನ. 30ರವರೆಗೆ ಗಡುವು ವಿಸ್ತರಿಸಲಾಗಿದೆ.

ಹೌದು, ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಂದ ಹಾಜರಾಗುವ, ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳಿಗೆ 2025ರ ಮಾರ್ಚ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ನೋಂದಣಿಯಾಗಲು ನವೆಂಬರ್‌ 30ರವರೆಗೆ ಅವಕಾಶ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಈ ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಮೊದಲು ನವೆಂಬರ್‌ 20 ನೋಂದಣಿಗೆ ಕೊನೆಯ ದಿನಾಂಕ ಎಂದು ತಿಳಿಸಿತ್ತು. ಆದರೆ, ಕೆಲವು ಶಾಲೆಗಳು ಮತ್ತು ಪೋಷಕರಿಂದ ದಿನಾಂಕ ವಿಸ್ತರಣೆಗೆ ಒತ್ತಾಯ ಬರುತ್ತಿರುವ ಹಿನ್ನೆಲೆಯಲ್ಲಿ ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿದೆ. ನ.30ರ ಬಳಿಕ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಇನ್ನು ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ನ. 30 ಕೊನೆಯ ದಿನಾಂಕ, ಪರೀಕ್ಷಾ ಶುಲ್ಕದ ಚಲನ್‌ ಮುದ್ರಿಸಲು ಡಿ.2 ರಿಂದ ಡಿ. 7ರವರೆಗೆ ಮತ್ತು ಚಲನ್‌ ಬ್ಯಾಂಕ್‌ಗೆ ಜಮೆ ಮಾಡಲು ಡಿ. 2ರಿಂದ ಡಿ.12ರವರೆಗೆ ಸಮಯ ನೀಡಲಾಗಿದೆ.

Leave A Reply