Karkala: ಶಾಲಾ ಬಸ್ ಮತ್ತು ಬೈಕ್ ಮುಖಾಮುಖಿ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು!

Share the Article

Karkala: ಶಾಲಾ ಬಸ್ ಮತ್ತು ಬೈಕ್ ಮುಖಾಮುಖಿ ಢಿಕ್ಕಿ ಆಗಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಿಯಾರು-ಜೋಡುಕಟ್ಟೆ (Karkala) ಬಳಿ ನ.23ರ ಇಂದು ಶನಿವಾರ ಬೆಳಗ್ಗೆ ನಡೆದಿದೆ.

ಮೃತಪಟ್ಟವರು ಸ್ಥಳೀಯ ‌ನಿವಾಸಿ ಅಜಿತ್ ಕುಮಾರ್ ಎಂದು ತಿಳಿದು ಬಂದಿದೆ. ಅಪಘಾತ ಸಂದರ್ಭ ಶಾಲೆಯ ಬಸ್ ನಲ್ಲಿ ವಿದ್ಯಾರ್ಥಿಗಳು ಇರಲಿಲ್ಲ.‌ ಖಾಲಿ ಬಸ್ ಎನ್ನಲಾಗಿದೆ‌. ಬಸ್ ಮದ್ಯ ಭಾಗಕ್ಕೆ ಬೈಕ್ ಢಿಕ್ಕಿಯಾಗಿದ್ದು, ತಲೆಗೆ ತೀವ್ರ ಗಾಯಗೊಂಡ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave A Reply