Cremation: ಚಿತೆಗೆ ಬೆಂಕಿ ಇಡುವಷ್ಟರಲ್ಲಿಯೇ ಸತ್ತ ವ್ಯಕ್ತಿ ಜೀವಂತ! ಇದು ಹೇಗೆ ಸಾಧ್ಯ?!
Cremation: ಚಿತೆಗೆ ಬೆಂಕಿ ಇಡುವಷ್ಟರಲ್ಲಿಯೇ ಸತ್ತ ವ್ಯಕ್ತಿ ಜೀವಂತವಾಗಿ ಎದ್ದು ಕೂತಿದ್ದಾನೆ ಅಂದರೆ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿಯೂ ಇರಬಹುದು. ಬನ್ನಿ ಅದೇನೆಂದು ನೋಡೋಣ.
ಹೌದು, ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿರುವ ಆಘಾತಕಾರಿ ಘಟನೆ ಇದಾಗಿದೆ. ಮಾಹಿತಿ ಪ್ರಕಾರ, 25 ವರ್ಷದ ಯುವಕ ರೋಹಿತಾಶ್ ಎಂಬಾತ ಜಿಲ್ಲಾಸ್ಪತ್ರೆ ಚಿಕಿತ್ಸೆ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ ಕಾರಣ ಮುಂದಿನ ಪ್ರಕ್ರಿಯೆಗಾಗಿ ಎರಡು ಮೂರು ಗಂಟೆಗಳ ಕಾಲ ದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ನಂತರ ಪಂಚನಾಮ ಪ್ರಕ್ರಿಯೆ ಮುಗಿಸಿ ಕೊನೆಗೆ ‘ಮೃತದೇಹ’ವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
ಮನೆಯವರು ‘ಶವ’ವನ್ನು ಅಂತಿಮ ವಿಧಿವಿಧಾನಗಳಿಗೆ ತೆಗೆದುಕೊಂಡು ಹೋದರು. ಆದರೆ, ಚಿತೆ ಹೊತ್ತಿ ಉರಿಯುವ (Cremation) ಸ್ವಲ್ಪ ಹೊತ್ತಿನ ಮೊದಲು ಯುವಕನ ದೇಹ ಅಲ್ಲಾಡಿದ್ದು, ಆತಂಕಗೊಂಡ ಮನೆಯವರು, ನೋಡಿದಾಗ ಆತ ಜೀವಂತ ಇರುವುದು ತಿಳಿದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿರ್ಲಕ್ಷ್ಯ ಪ್ರಕರಣದಲ್ಲಿ ಮೂವರು ವೈದ್ಯರನ್ನು ಅಮಾನತುಗೊಳಿಸಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದೆ.
ಈ ಪ್ರಕಾರಣ ಹಿನ್ನಲೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಪಚಾರ್ ಮತ್ತು ಅವರ ಇಬ್ಬರು ಸಹೋದ್ಯೋಗಿಗಳಾದ ಯೋಗೇಶ್ ಜಾಖರ್ ಮತ್ತು ನವನೀತ್ ಅವರನ್ನು ಅಮಾನತುಗೊಳಿಸಿದ್ದಾರೆ. ಮೂವರು ವೈದ್ಯರ ವಿರುದ್ಧ ಇಲಾಖಾ ವಿಚಾರಣೆಯನ್ನೂ ಆರಂಭಿಸಲಾಗಿದೆ.