Kokkada: ಸೌತಡ್ಕ ಕ್ಷೇತ್ರದಲ್ಲಿ ಸಿಬ್ಬಂದಿ ಮೇಲೆ 20ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಹಲ್ಲೆ – ಸ್ಥಿತಿ ಗಂಭೀರ !!

Share the Article

Kokkada: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಕ್ಕಡ ಬಳಿಯ (Kokkada)ಸೌತಡ್ಕ ಗಣಪತಿ(Southadka Ganapati)ಕ್ಷೇತ್ರದಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಯಾತ್ರಾರ್ಥಿಗಳು ಹಲ್ಲೆ ಮಾಡಿದ ಘಟನೆ ನಡೆದಿದೆ.

ಹೌದು, ನ. 20ರಂದು ಸೌತಡ್ಕದಲ್ಲಿ ಈ ಘಟನೆ ನಡೆದಿದೆ. ಮಹೇಂದ್ರ ಕೊಲ್ಲಾಜೆಪಳಿಕೆ(Mahendra Kollajepalike)ಹಲ್ಲೆಗೊಳಗಾದ ಸಿಬ್ಬಂದಿ. ಮಹೇಂದ್ರ ತಲೆಗೆ ಗಂಭೀರ ಏಟು ತಗಲಿದ ಪರಿಣಾಮ ಅವರು ಪ್ರಜ್ಞೆ ಕಳೆದುಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಕೊಕ್ಕಡ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮಹೇಂದ್ರ ಅವರು ಮೊಬೈಲ್‌ ಲೈಟ್‌ ಬಳಸಿ ಶೌಚಾಲಯವನ್ನು ಶುಚಿಗೊಳಿಸುತ್ತಿದ್ದರು. ಈ ಸಮಯ ಬೆಂಗಳೂರಿನಿಂದ ಬಂದ ಯಾತ್ರಾರ್ಥಿಗಳು ಶೌಚಾಲಯವನ್ನು ಬಳಸುತ್ತಿದ್ದರು. ಮಹೇಂದ್ರ ಅವರ ಮೊಬೈಲ್‌ ಲೈಟ್‌ ಉರಿಯುತ್ತಿದ್ದದ್ದನ್ನು ನೋಡಿ ಆತ ತಮ್ಮ ವೀಡಿಯೋ ಮಾಡುತ್ತಿದ್ದಾನೆ ಎಂದು ಅನುಮಾನಿಸಿ ಏಕಾಏಕಿ 20ಕ್ಕಿಂತಲೂ ಹೆಚ್ಚು ಯಾತ್ರಾರ್ಥಿಗಳು ಮಹೇಂದ್ರ ಅವರಿಗೆ ಹಲ್ಲೆ ಮಾಡಿದ್ದಾರೆ.

ಸಧ್ಯ ಪ್ರಕರಣಕ್ಕೆ ಸಂಬಂಧಿಸಿ ಸೌತಡ್ಕ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್‌ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.