Kerala: ತಾನೇ ಸಾಕಿದ ಮೊಲ ಕಚ್ಚಿ ಮಹಿಳೆ ಸಾವು !!

Kerala: ತಾನೇ ಸಾಕಿರುವ ಮೊಲವೊಂದು ಕಚ್ಚಿ ಮಹಿಳೆಯೋರ್ವಳು ಮೃತಪಟ್ಟಿರುವಂತಹ ಘಟನೆ ಕೇರಳದಲ್ಲಿ ನಡೆದಿದೆ.

 

 

ಕೇರಳದ(Kerala) ಅಲಪ್ಪುಳ ತಕಾಝೀಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಶಾಂತಮ್ಮ (65 ) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ. ಶಾಂತಮ್ಮ ಅವರು ಪ್ರೀತಿಯಿಂದ ಮೊಲ ಒಂದನ್ನು ಸಾಕಿದ್ದರು. ಅದು ಆಟವಾಡುವ ವೇಳೆ ಶಾಂತಮ್ಮನನ್ನು ಕಚ್ಚಿತ್ತು. ಮೊಲ ಕಚ್ಚಿದ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಶಾಂತಮ್ಮ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೇಬಿಸ್ ವಿರೋಧಿ ಲಸಿಕೆ ತೆಗೆದುಕೊಂಡಿದ್ದರು.

 

ಲಸಿಕೆಯ ಮೂರನೇ ಡೋಸ್ ತೆಗೆದುಕೊಂಡ ನಂತರ ಶಾಂತಮ್ಮ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಆದಾಗಲೇ ಆಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು, ಬಳಿಕ ಬಿಡುಗಡೆಯಾಗಿ ಮನೆಗೆ ಬಂದ ಶಾಂತಮ್ಮ ಮೃತಪಟ್ಟಿದ್ದಾಳೆ.

Leave A Reply

Your email address will not be published.